ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸ್ಥಳೀಯರಿಂದ ನಂ.04 ಶಾಲೆಗೆ ಬೀಗ... ಮನವೊಲಿಸಿ ಬೀಗ ತೆಗೆಸಿದ ಬಿಇಒ

ನವಲಗುಂದ : ಪಟ್ಟಣದ ಸಿದ್ದಾಪೂರ ಓಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.04 ಕ್ಕೆ ಶಿಕ್ಷಕರ ನೇಮಕ ಕುರಿತಂತೆ ಸ್ಥಳೀಯರು ಬೀಗ ಜಡಿದು ಪ್ರತಿಭಟನೆ ನಡೆಸಿದರು. ಶಾಲಾ ಮಕ್ಕಳು, ಶಿಕ್ಷಕರು ಕೆಲ ಕಾಲ ಗೇಟ್ ಬಳಿಯೇ ನಿಲ್ಲುವಂತಾಗಿತ್ತು.

ಈಗಾಗಲೇ ಈ ಶಾಲೆಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಹಿನ್ನಲೆ ಆತನ ಮೇಲೆ ಕಾನೂನು ಕ್ರಮ ಜರುಗುತ್ತಿದ್ದು, ಈಗ ಶಾಲೆಗೆ ಮಹಿಳಾ ಶಿಕ್ಷಕಿಯನ್ನು ನಿಯೋಜನೆ ಮಾಡುವಂತೆ ಆಗ್ರಹಿಸಿ ಸ್ಥಳೀಯರು ಶಾಲೆ ವೇಳೆ ಬೆಳಿಗ್ಗೆ 10ಘಂಟೆಗೆ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ಬಿಇಒ ಶಿವಾನಂದ ಮಲ್ಲಾಡ ಸ್ಥಳೀಯರೊಂದಿಗೆ ಮಾತನಾಡಿ ಮನವೊಲಿಸಿ, ನಾಳೆ ಒಬ್ಬ ಶಿಕ್ಷಕಿಯನ್ನು ಈ ಶಾಲೆಗೆ ನಿಯೋಜನೆ ಮಾಡುತ್ತೇವೆ ಎಂದರು. ನಂತರ ಶಾಲೆಗೆ ಹಾಕಿರುವ ಬೀಗ ತೆಗೆಯಲಾಯಿತು. ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದರ ಎಂಬ ಶಿಕ್ಷಕನ್ನು ಈಗಾಗಲೇ ಅಮಾನತು ಮಾಡಲಾಗಿದ್ದು, ಶಿಕ್ಷಕರ ಕೊರತೆ ನೀಗಿಸುವಾದಾಗಿ ಹೇಳಿದರು.

ಈ ವೇಳೆ ಸ್ಥಳೀಯರಾದ ಶಂಕ್ರಣ್ಣ ತೋಟದ, ಎಸ್ಡಿಎಂಸಿ ಅಧ್ಯಕ್ಷ ಆನಂದ ಹವಳಕೊಡ, ಸದಸ್ಯರು ಸೇರಿದಂತೆ ಮಕ್ಕಳ ಪಾಲಕರು, ಸ್ಥಳೀಯರು ಇದ್ದರು.

- ಶಂಕರ ಸುಭೇದಾರಮಠ, ಪಬ್ಲಿಕ್ ನೆಕ್ಸ್ಟ್ ನವಲಗುಂದ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/01/2025 05:08 pm

Cinque Terre

25.64 K

Cinque Terre

0

ಸಂಬಂಧಿತ ಸುದ್ದಿ