ನವಲಗುಂದ : ಗ್ರಾಮೀಣ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದಾರೆ. ಅವರಲ್ಲಿರುವ ಪ್ರತಿಭೆ ಹೊರತರಲು ಇಂತಹ ವಿಜ್ಞಾನ ಮೇಳ ಆಯೋಜಿಸುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಶಾರದಾ ಆಂಗ್ಲ ಮಾಧ್ಯಮ ಶಾಲೆ ನಡೆಸುತ್ತಿರುವ ವಿಜ್ಞಾನ ಮೇಳ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುತ್ತಿದೆ ಎಂದು ಹಿರಿಯ ರಾಯನಗೌಡ ಪಾಟೀಲ ಹೇಳಿದರು.
ತಾಲೂಕಿನ ನಾಗನೂರು ಗ್ರಾಮದ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮೇಳ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ಅವರಲ್ಲಿ ವೈಜ್ಞಾನಿಕ ಮನೋಭಾವ ತುಂಬಿ, ವಿದ್ಯಾರ್ಥಿಗಳಿಂದಲೇ ಹೊಸ ಆವಿಷ್ಕಾರ ರೂಪಿಸುವ ನಿಟ್ಟಿನಲ್ಲಿ ಈ ಶಾಲೆ ಶಿಕ್ಷಕರು ಕಾರಣಿ ಭೂತರಾಗಿದ್ದಾರೆ ಎಂದರು.
ಶಾಲೆಯ 200 ಕ್ಕೂ ಹೆಚ್ಚು ಮಕ್ಕಳಿಂದ ಮಾನವನ ಹೃದಯದ ವಿಭಾಗ, ಅರಣ್ಯ, ನೀರಿನ ಮೂಲಗಳಂತಹ ನೂರಾರು ವಿಜ್ಞಾನ ಪ್ರಯೋಗಗಳು ಪ್ರದರ್ಶನಗೊಂಡಿದ್ದವು. ನಾಗನೂರ ಸುತ್ತಮುತ್ತಲಿನ ಗ್ರಾಮದ ಸರಕಾರಿ ಶಾಲೆಯ 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲಕರು ಪ್ರಯೋಗಗಳನ್ನು ವೀಕ್ಷಿಸಿದರು.
ಶಿಕ್ಷಣ ಇಲಾಖೆಯ ಶ್ರೀನಿವಾಸ ಅಮತೆನ್ನವ್ವರ, ಮಹೇಶ ಮಂತ್ರಿ, ಡಾ.ಬಿ ಎಸ್ ಶಿವನಗೌಡ್ರ, ಡಾ.ಅಬ್ದುಲರಝಾಕ ನದಾಫ್ ಸಂಸ್ಥೆಯ ಅಧ್ಯಕ್ಷ ಪುಷ್ಪಾ ಹಿರೇಮಠ, ಡಾ. ಮಹೇಶ ಹಿರೇಮಠ ಸೇರಿ ಆಡಳಿತ ಮಂಡಳಿ ಪದಾಧಿಕಾರಿಗಳು, ಶಾಲಾ ಶಿಕ್ಷಕರು ಸಿಬ್ಬಂದಿಗಳು ಇದ್ದರು.
Kshetra Samachara
13/01/2025 01:33 pm