ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕಂದಾಯ ಇಲಾಖೆಯ ಹಳೆಯ ರೆಕಾರ್ಡ ಆಧುನಿಕ ಡಿಜಿಟಲೀಕರಣಕ್ಕೆ ಚಾಲನೆ

ನವಲಗುಂದ: ಸರ್ಕಾರದ ಕಂದಾಯ ಇಲಾಖೆಯ ಮಹತ್ವದ ಕಾರ್ಯಕ್ರಮ ಹಳೆಯ ರೆಕಾರ್ಡಗಳನ್ನು ಆಧುನಿಕ ಪದ್ದತಿಯಲ್ಲಿ ಡಿಜಿಟಲೀಕರಣ ಮಾಡುವ ಕಾರ್ಯಕ್ಕೆ ಶಾಸಕ ಎನ್.ಹೆಚ್.‌ ಕೋನರಡ್ಡಿ ಚಾಲನೆ ನೀಡಿದರು.

ಪಟ್ಟಣದ ಹಳೆಯ ತಹಶೀಲ್ದಾರ ಕಾರ್ಯಾಲಯದಲ್ಲಿ ಹಳೆಯ ರೆಕಾರ್ಡಗಳನ್ನು ಡಿಜಿಟಲೀಕರಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕರ್ನಾಟಕ‌‌ ಸರ್ಕಾರದ ಕಂದಾಯ ಸಚಿವರಾದ ಇಲಾಖೆಯ ಮಹತ್ವದ ದಾಖಲೆಗಳನ್ನು ಕಾಪಾಡುವ ನಿಟ್ಟಿನಲ್ಲಿ ಭೂಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ಗಣಕೀಕರಣ ಮಾಡುವ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಿಂದ ಸರ್ಕಾರದ ಭೂ ದಾಖಲಾತಿಗಳನ್ನು ಸಾರ್ವಜನಿಕರು ಸ್ವತಃ ತಾವೇ ನೇರವಾಗಿ ಆನ್ಲೈನ್ ಮೂಲಕ ನೋಡಬಹುದಾಗಿದೆ. ಅಲ್ಲದೇ ಇದರಿಂದ ಸಾರ್ವಜನಿಕರ ಆಸ್ತಿಗಳ ದಾಖಲೆಗಳನ್ನು ರಕ್ಷಿಸುವ ಕಾರ್ಯವೂ ಆಗಲಿದೆ ಎಂದು ಕೋನರಡ್ಡಿ ಹೇಳಿದರು.

ಈ ಸಂದರ್ಭದಲ್ಲಿ ನವಲಗುಂದ ತಹಶೀಲ್ದಾರ ಸುಧೀರ ಸಾವಕಾರ, ಅಣ್ಣಿಗೇರಿ ತಹಶೀಲ್ದಾರ ಮಂಜುನಾಥ ದಾಸಪ್ಪನವರ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸದಸ್ಯರುಗಳಾದ ಜೀವನ ಪವಾರ, ಮೊದಿನ ಶಿರೂರ ರೈತ ಹೋರಾಟಗಾರ ವೀರೇಶ ಸೊಬರದಮಠ, ಎಡಿಎಲಆರ್‌ ಹಿರೇಗೌಡರ, ರಿಶಿ ಸಾರಂಗಿ, ಕೆ.ಎಮ್‌. ಪಾಟೀಲ ಸೇರಿದಂತೆ ತಹಶೀಲ್ದಾರ ಕಾರ್ಯಾಲಯದ ಸಿಬ್ಬಂದಿಗಳ ಉಪಸ್ತಿತರಿದ್ದರು.

Edited By : PublicNext Desk
Kshetra Samachara

Kshetra Samachara

15/01/2025 06:33 pm

Cinque Terre

6.44 K

Cinque Terre

0

ಸಂಬಂಧಿತ ಸುದ್ದಿ