ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ಸೇರುವ ಸಂಗಮದಲ್ಲಿ ತೆಪ್ಪೋತ್ಸವ

ನವಲಗುಂದ: ಪಟ್ಟಣದ ಕೂಡಲಸಂಗಮ ಎಂದು ಕರೆಯಲ್ಪಡುವ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ಸೇರುವ ಸಂಗಮದಲ್ಲಿ ಇಂದು ಅದ್ಧೂರಿಯಾಗಿ ತೆಪ್ಪೋತ್ಸವ ಜರುಗಿತು.

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಮಕರ ಸಂಕ್ರಮಣ ಹಬ್ಬದ ದಿನದಂದು ನಡೆಯುವ ಈ ತೆಪ್ಪೋತ್ಸವ, ಗಾಂಧಿ ಮಾರುಕಟ್ಟೆಯಲ್ಲಿ ಇರುವ ಪಾಂಡುರಂಗ ದೇವಸ್ಥಾನದಿಂದ ಮೆರವಣಿಗೆ ಮೂಲಕ ಆಗಮಿಸಿ ನಗರದ ಬಸವರಾಜ ಹಳ್ಳದ ಅವರ ಜಮೀನಿನಲ್ಲಿ ಇರುವ ಕೂಡಲಸಂಗಮ ದೇವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಹಳ್ಳದಲ್ಲಿ ತೆಪ್ಪೋತ್ಸವ ನಡೆಯುವದು.

ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ತೆಪ್ಪೋತ್ಸವದಲ್ಲಿ ಪಾಲ್ಗೊಂಡು ಕೂಡಲಸಂಗಮ ದೇವನ ಕೃಪೆಗೆ ಪಾತ್ರರಾದರು.

Edited By : PublicNext Desk
Kshetra Samachara

Kshetra Samachara

14/01/2025 05:19 pm

Cinque Terre

15.74 K

Cinque Terre

1

ಸಂಬಂಧಿತ ಸುದ್ದಿ