", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1736875279-mane.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Iranna Y Walikar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಮನೆಯಲ್ಲಿ ಯಾರೂ ಇಲ್ಲದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು, ಮನೆಯಲ್ಲಿದ್ದ ಬಂಗಾರ ಹಾಗೂ ಹಣ ಕದ್ದು ಎಸ್ಕೇಪ್ ಆಗಿರುವ ಘಟನೆ ಹುಬ್ಬಳ್ಳ...Read more" } ", "keywords": "Hubballi Crime, Kusugal Theft, House Burglary, Gold Stolen, Cash Stolen, Hubballi Police, Karnataka Crime News, Theft in Hubballi, Burglary Incident, Crime in Kusugal, Hubli-Dharwad News.,Hubballi-Dharwad,Crime,Law-and-Order", "url": "https://publicnext.com/node" }
ಹುಬ್ಬಳ್ಳಿ: ಮನೆಯಲ್ಲಿ ಯಾರೂ ಇಲ್ಲದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು, ಮನೆಯಲ್ಲಿದ್ದ ಬಂಗಾರ ಹಾಗೂ ಹಣ ಕದ್ದು ಎಸ್ಕೇಪ್ ಆಗಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದ ಕಿಲ್ಲೆಯಲ್ಲಿ ತಡರಾತ್ರಿ ನಡೆದಿದೆ.
ಗ್ರಾಮದ ಕಿಲ್ಲೆಯಲ್ಲಿ ವಾಸಿಸುತ್ತಿರುವ ಅಕ್ಬರ್ ಭಾಷಾ ಎಂಬಾತರ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, ಟ್ರೇಜರಿಯಲ್ಲಿದ್ದ ಒಂದೂ ತೊಲೆ ಬಂಗಾರದ ಚೈನ್ ಮತ್ತು ಅರ್ಧ ತೊಲೆ ಬಂಗಾರದ ಉಂಗುರ, ಮಕ್ಕಳ ಸುತ್ತುಂಗುರ ಸೇರಿದಂತೆ ಹತ್ತು ಸಾವಿರ ಹಣ ಕದ್ದು ಎಸ್ಕೇಪ್ ಆಗಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಎಎಸ್ಐ ಹೊನ್ನಪ್ಪನ್ನವರ ಹಾಗೂ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾಲೀಕರಿಂದ ಮಾಹಿತಿಯನ್ನು ಪಡೆದು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಇನ್ನೂ ಮನೆ ರಸ್ತೆಯ ಬ್ರಿಡ್ಜ್ ಮೇಲೆ ಯುವಕರ ದಂಡು ತಡರಾತ್ರಿವರೆಗೂ ಕಾಲಹರಣ ಮಾಡುತ್ತಾರೆ.
ಆದ್ದರಿಂದ ಇಲ್ಲಿನ ಜನರು ಸಹ ಯುವಕರಿಗೆ ಎಚ್ಚರಿಕೆ ಹೇಳುವಂತೆ ಪೊಲೀಸರಿಗೆ ತಿಳಿಸಿದ್ದಾರೆ. ಈ ಕಳ್ಳತನ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
14/01/2025 10:51 pm