ಹುಬ್ಬಳ್ಳಿ: ಬಟ್ಟೆ ಖರೀದಿ ನೆಪದಲ್ಲಿ ಇಬ್ಬರು ಕಪಲ್ ಮಳ್ಳರಂತೆ ಬಂದು ಅಂಗಡಿಯ ಗಲ್ಲೆಯಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗುತ್ತಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಟಿಪ್‌ಟಾಪ್ ಆಗಿ ಬಂದ ಈ ಕಪಲ್ಸ್ ಗೆ ದೊಡ್ಡ ದೊಡ್ಡ ಬ್ರ್ಯಾಂಡೆಡ್ ಅಂಗಡಿಗಳೇ ಇವರ ಟಾರ್ಗೆಟ್. ಇವರು ಒಂದೇ ಅಂಗಡಿ ಅಲ್ಲದೇ ಬರೋಬ್ಬರಿ ನಾಲ್ಕು ಅಂಗಡಿಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಸರಣಿ ಕಳ್ಳತನ ಮಾಡಿರುವ ದೃಶ್ಯಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಹೌದು,,,, ನೋಡಿದ್ರಲ್ಲ ವೀಕ್ಷಕರೇ ಈ ಇಬ್ಬರು ಹುಡುಗ ಹುಡುಗಿ ನೋಡೋದಕ್ಕೆ ಸಖತ್ ಆಗಿ ರೆಡಿ ಆಗಿ ಬರುತ್ತಾರೆ. ಆದ್ರೆ ಇವರ ಟಾರ್ಗೆಟ್ ಬೇರೇನೇ ಇರುತ್ತೆ. ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯಲ್ಲಿರುವ ಕೆಲವೊಂದು ಬ್ರ್ಯಾಂಡೆಡ್ ಬಟ್ಟೆ ಅಂಗಡಿಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಇಬ್ಬರು ಮಳ್ಳರಂತೆ ಬ್ರ್ಯಾಂಡೆಡ್ ಬಟ್ಟೆ ಅಂಗಡಿಗೆ ಬರುತ್ತಾರೆ. ಮೊದಲಿಗೆ ಬಟ್ಟೆ ಎಲ್ಲ ನೋಡುತ್ತಾರೆ. ಅಂಗಡಿಯಲ್ಲೆ ಒಬ್ಬರೇ ಇದ್ರೆ ಸಾಕು ಇವರ ಕೈ ಚಳಕ ತೋರಿಸಲು ಇಬ್ಬರು ಕಣ್ಣು ಸನ್ನೆ ಮಾಡ್ತಾರೆ. ನಂತರ ಸ್ಟಾರ್ಟ್ ಮಾಡ್ತಾರೆ ನೋಡಿ ಇವರ ಆಟ ಇದೆಲ್ಲ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆ ಹುಡುಗ ಮೊದಲಿಗೆ ಬಟ್ಟೆ ಟ್ರಯಲ್ ನೋಡಲು ಹೋಗುತ್ತಾನೆ. ಚಾಲಾಕಿ ಹುಡುಗಿ ಬಟ್ಟೆ ತೋರಿಸಲು ಅದು ಇದು ಅಂತ ನೆಪ ಮಾಡಿ ಅಂಗಡಿ ಮಾಲೀಕರ ಗಮನವನ್ನು ಬೇರೆಡೆ ಸೆಳೆಯುತ್ತಾಳೆ. ಟ್ರಯಲ್ ರೂಮ್ ಗೆ ಹೋಗಿದ್ದ ಕಳ್ಳ ಹುಡುಗ ಸೀದಾ ಗಲ್ಲೆ ಹತ್ತಿರ ಹೋಗಿ ಇದ್ದಬಿದ್ದ ಹಣವನ್ನು ಕಳ್ಳತನ ಮಾಡುತ್ತಾನೆ. ನಿನ್ನೆ ದಿನದಂದು ಮೊದಲಿಗೆ ಕೊಪ್ಪಿಕರ ರಸ್ತೆಯಲ್ಲಿರುವ ಫ್ಲೈಯಿಂಗ್ ಮಷಿನ್ ಬಟ್ಟೆ ಅಂಗಡಿ 30 ಸಾವಿರ ರೂಪಾಯಿ ಕಳ್ಳತನ ಮಾಡಿ ಕಾಲ್ಕಿತ್ತಿದ್ದಾರೆ. ಇದೊಂದು ಅಲ್ದೆ ಅಲ್ಲೆ ಪಕ್ಕದಲ್ಲಿರುವ ಕಿಲ್ಲರ್ ಬಟ್ಟೆ ಶೋರೂಮ್, ಯು.ಎಸ್ ಪೋಲೋ ಬಟ್ಟೆ ಅಂಗಡಿ, ಗೋಕುಲ ರಸ್ತೆಯ ಜಾಕಿ ಬಟ್ಟೆಗಳಲ್ಲಿ ಮಳ್ಳರಂತೆ ಬಂದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಇನ್ನು ಇದು ಬಯಲಿಗೆ ಬರಬೇಕಾದ್ರೆ, ಸ್ವಲ್ಪ ಹೊತ್ತಿನಲ್ಲಿ ಅಂಗಡಿ ಮಾಲೀಕರು ತಮ್ಮ ಗಲ್ಲೆಯನ್ನು ಚೆಕ್ ಮಾಡಿದ್ದಾರೆ. ಹಣ ಇಲ್ಲದನ್ನು ನೋಡಿ ಗಾಬರಿಯಾಗಿದ್ದಾರೆ. ಸಿಸಿ ಕ್ಯಾಮೆರಾ ಚೆಕ್ ಮಾಡಿದಾಗ ಗೊತ್ತಾಯ್ತು, ಈ ಇಬ್ಬರೂ ಹುಡುಗ ಹುಡುಗಿ ಬಟ್ಟೆ ಖರೀದಿ ನೆಪದಲ್ಲಿ ಬಂದು ಕಳ್ಳತನ ಮಾಡಿದ್ದಾರೆ. ಈಗಾಗಲೇ ಬಟ್ಟೆ ಅಂಗಡಿ ಮಾಲೀಕರು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇಂತಹ ಕಳ್ಳರನ್ನು ಪೊಲೀಸರು ಆದಷ್ಟು ಬೇಗನೆ ಸೆರೆ ಹಿಡಿದು ಶಿಕ್ಷೆಗೆ ಒಳಪಡಿಸಬೇಕೆಂದು ಅಂಗಡಿ ಮಾಲೀಕರ ಒತ್ತಾಯವಾಗಿದೆ. ಇನ್ಮುಂದಾದ್ರು ಬಟ್ಟೆ ಅಂಗಡಿ ಅಷ್ಟೇ ಅಲ್ದೆ ಬೇರೆ ಅಂಗಡಿ ಮಾಲೀಕರು ತಮ್ಮ ತಮ್ಮ ಗಲ್ಲೆಯನ್ನು ಲಾಕ್ ಮಾಡಿ ಇಟ್ಟುಕೊಳ್ಳಿ ಎಂಬುದು ಪೊಲೀಸರ ಸಲಹೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/01/2025 04:31 pm