ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸಾಂಪ್ರದಾಯಿಕ ಸಂಕ್ರಾಂತಿ ಆಚರಿಸಿದ ಹರಭಟ್ಟ ಕಾಲೇಜು ಮಕ್ಕಳು ಖುಷ್

ಕುಂದಗೋಳ: ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಸಡಗರಕ್ಕೆ ಇಲ್ಲೊಂದು ಕಾಲೇಜು ಸಾಂಸ್ಕೃತಿಕ, ಸಾಂಪ್ರದಾಯಿಕ ಕುಟುಂಬವಾಗಿ ಹಬ್ಬದ ಸವಿಯನ್ನು ಆನಂದಿಸಿದೆ.

ಕುಂದಗೋಳ ಪಟ್ಟಣದ ಹರಭಟ್ಟ ಸಂಯುಕ್ತ ಪದವಿ ಪೂರ್ವ ಕಾಲೇಜು ಅಕ್ಷರಶಃ ಸಾಂಪ್ರದಾಯಿಕ ಶೈಲಿಯಲ್ಲಿ ಕಾಲೇಜು ಆವರಣದಲ್ಲೇ ಸಂಕ್ರಾಂತಿ ಸಡಗರವನ್ನು ಶಿವಾನಂದ ಮಠದ ಮಹಾಂತ ಶಿವಯೋಗಿಗಳ ದಿವ್ಯ ಸಾನ್ನಿಧ್ಯದಲ್ಲಿ ಸಸಿಗೆ ನೀರೆರೆದು ಉದ್ಘಾಟಿಸಿತು. ಬಳಿಕ ಕಾಲೇಜು ಆವರಣದಲ್ಲಿ ಜೋಳದ ರಾಶಿ, ರಂಗೋಲಿ ಮಾಡಿ ಕನ್ನಡದ ಗೀತೆಗಳಿಗೆ ಕಾಲೇಜು ವ್ಯವಸ್ಥಾಪಕ ಮಂಡಳಿ, ಉಪನ್ಯಾಸಕರು ಸೇರಿದಂತೆ, ಆಡಳಿತ ಮಂಡಳಿ ಸದಸ್ಯರು, ಮಾಜಿ ಶಾಸಕರು ಹೆಜ್ಜೆ ಹಾಕಿ ಸಂಕ್ರಾಂತಿ ಸವಿಯನ್ನು ಸವಿದರು.

ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಜೋಳದ ರೊಟ್ಟಿ, ತರ ತರಹದ ಪಲ್ಯ, ಸಿಹಿ ಅಡುಗೆ ಸೇರಿದಂತೆ ಅನ್ನ ಸಾಂಬಾರ್ ಸಾಲಾಗಿ ಕುಳಿತು ಭೋಜನ ಮಾಡಿದರೇ, ಗಣ್ಯರೆಂಬ ಅಹಂ ತೊರೆದು ಆಡಳಿತ ಮಂಡಳಿ ಸದಸ್ಯರು ಮುದ್ದು ವಿದ್ಯಾರ್ಥಿಗಳಿಗೆ ಊಟ ಬಡಿಸಿದ್ದಾರೆ.

ಒಟ್ಟಾರೆ ಕುಂದಗೋಳ ಪಟ್ಟಣದ ಹರಭಟ್ಟ ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಕ್ರಾಂತಿ ಸಂಭ್ರಮವನ್ನು ಮತ್ತಷ್ಟೂ ಉತ್ಸಾಹದಿಂದ ಸಂಭ್ರಮಿಸಿದೆ.

Edited By : Manjunath H D
Kshetra Samachara

Kshetra Samachara

14/01/2025 03:52 pm

Cinque Terre

14.91 K

Cinque Terre

1

ಸಂಬಂಧಿತ ಸುದ್ದಿ