ಹುಬ್ಬಳ್ಳಿ : ಕೃತಿಯಲ್ಲಿ ಮಾತ್ರವಲ್ಲದೆ ನಮ್ಮ ವಿಚಾರದಲ್ಲಿಯೂ ಕೂಡ ಅಹಿಂಸೆಯ ಸಿದ್ಧಾಂತವನ್ನು ಅನುಸರಿಸುವ ಜೈನಧರ್ಮ ನಾಡಿಗೆ, ದೇಶಕ್ಕೆ, ಕಲೆ ಮತ್ತು ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ನಟ ರಮೇಶ ಅರವಿಂದ ಹೇಳಿದರು.
ವರೂರಿನ ನವಗ್ರಹ ತೀರ್ಥ ಕ್ಷೇತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಹೈಸ್ಕೂಲ್ ನಲ್ಲಿ ಕಲೆತಿದ್ದರೂ ಕೂಡ ಇಂದಿಗೂ ಕೂಡ ಜೈನ ಧರ್ಮದ ಆದರ್ಶಗಳು ಕಿವಿಯಲ್ಲಿ ಮೊಳಗುತ್ತಿವೆ. ಜೈನ ತೀರ್ಥಂಕರರ ಸಾಮಾಜಿಕ ಕಳಕಳಿ, ಅಹಿಂಸೆಯ ಆದರ್ಶನ ನಿಜಕ್ಕೂ ಸಮಾಜದಲ್ಲಿ ಬಹುದೊಡ್ಡ ಶಾಂತಿಯನ್ನು ನೆಲೆ ನಿಲ್ಲುವಂತೆ ಮಾಡಿರುವುದು ನಿಜಕ್ಕೂ ವಿಶೇಷವಾಗಿದೆ ಎಂದು ಅವರು ಅಭಿನಂದನೆ ಸಲ್ಲಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/01/2025 07:45 pm