ಹುಬ್ಬಳ್ಳಿ: ಲೋಕ ಕಲ್ಯಾಣ ಹಾಗೂ ಜಗತ್ತಿನಲ್ಲಿ ಶಾಂತಿ ನೆಲೆನಿಲ್ಲುವಂತೆ ಮಾಡುವ ಸದುದ್ದೇಶದಿಂದ ಮಹಾಮಸ್ತಕಾಭಿಷೇಕ ಹಮ್ಮಿಕೊಳ್ಳಲಾಗಿದೆ. ಇದರಿಂದ ಸರ್ವ ಲೋಕ ಕಲ್ಯಾಣವಾಗಲಿ. ಎಲ್ಲರಿಗೂ ಶುಭವಾಗಲಿ ಎಂದು ಕುಂತುಸಾಗರ ಮುನಿ ಮಹಾರಾಜರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾಮಸ್ತಕಾಭಿಷೇಕದಲ್ಲಿ ಮಾತನಾಡಿದ ಅವರು, ಜನ ಕಲ್ಯಾಣವಾದರೇ ಜಗತ್ತು ಕಲ್ಯಾಣವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಶಾಂತಿ ಸೌಹಾರ್ದತೆಯಿಂದ ಎಲ್ಲರೂ ಬಾಳಬೇಕು ಎಂದು ಅವರು ಸಂದೇಶ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/01/2025 06:18 pm