ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಷ್ಟಕ ಪೂಜೆಯ ಮೂಲಕ ಪಾರ್ಶ್ವನಾಥರಿಗೆ ಗೌರವ ಸಮರ್ಪಣೆ

ಹುಬ್ಬಳ್ಳಿ: ಹಲವಾರು ವೈಶಿಷ್ಟ್ಯಗಳ ಮೂಲಕ ವಿನೂತನ ರೀತಿಯಲ್ಲಿ ಪಾರ್ಶ್ವನಾಥರಿಗೆ ಮಹಾ ಮಸ್ತಕಾಭಿಷೇಕ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ವಿಶೇಷವಾಗಿ ಅಷ್ಟಕ ಪೂಜೆಯ ಮೂಲಕ ವಿಶೇಷ ಪಾರ್ಥನೆ ಸಲ್ಲಿಸಲಾಯಿತು.

ಹುಬ್ಬಳ್ಳಿಯ ವರೂರಿನ ಗ್ರಾಮದಲ್ಲಿ ಬಹುದೊಡ್ಡ ಮೆರಗನ್ನು ತಂದಿದ್ದು, ರಾಷ್ಟ್ರಸಂತ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಹಾಗೂ ಜೈನ್ ಆಚಾರ್ಯರ ನೇತೃತ್ವದಲ್ಲಿ ಅಷ್ಟಕ ಪೂಜೆಯನ್ನು ಸಲ್ಲಿಸುವ ಮೂಲಕ ಜೈನ ತೀರ್ಥಂಕರರಿಗೆ ವಿಶೇಷ ಗೌರವ ಸಮರ್ಪಣೆ ಮಾಡಲಾಯಿತು.

ಇನ್ನೂ ಹದಿನೇಳಕ್ಕೂ ಹೆಚ್ಚು ಜೈನ ಆಚಾರ್ಯರ ಸಹಭಾಗಿತ್ವದಲ್ಲಿ ಅದ್ಧೂರಿಯಾಗಿ ಅಷ್ಟಕ ಪೂಜೆ ನೆರವೇರಿದ್ದು, ಮಹಾ ಆರತಿ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/01/2025 07:02 pm

Cinque Terre

26.93 K

Cinque Terre

0

ಸಂಬಂಧಿತ ಸುದ್ದಿ