ಹುಬ್ಬಳ್ಳಿ : ಉತ್ತರ ಕರ್ನಾಟಕದ ಪ್ರಮುಖ ಜೈನ್ ತೀರ್ಥ ಕ್ಷೇತ್ರ, ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ಆದ್ದೂರಿ ಚಾಲನೆ ದೊರೆತಿದೆ. ಹನ್ನೆರಡು ವರ್ಷಗಳ ಬಳಿಕ ಮತ್ತೊಮ್ಮೆ ಮಹಾ ಮಜ್ಜನಕ್ಕೆ ಅಣಿಯಾಗಿದ್ದು, ವಿಶಿಷ್ಟ ಧಾರ್ಮಿಕ ಆಚರಣೆಗೆ ವರೂರು ಸಾಕ್ಷಿಯಾಗಲಿದೆ. 12 ದಿನಗಳ ಧಾರ್ಮಿಕ ಸಮ್ಮೇಳನಕ್ಕೆ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಚಾಲನೆ ನೀಡಿದರು. ವರೂರಿನ ದಿಗಂಬರ ಜೈನ ನವಗ್ರಹ ತೀರ್ಥ ಕ್ಷೇತ್ರಕ್ಕೆ ಜನಸಾಗರವೇ ಹರಿದು ಬಂದಿದೆ.
ಇಂದಿನಿಂದ ಜನವರಿ 26ರ ವರೆಗೆ ಅಂದರೆ, 12 ದಿನಗಳ ಕಾಲ ದಿಗಂಬರ ಜೈನ್ ನವಗ್ರಹ ತೀರ್ಥ ಕ್ಷೇತ್ರದ ವರೂರು, ಧರ್ಮ ಸಮ್ಮೇಳನಕ್ಕೆ ಸಾಕ್ಷಿಯಾಗಲಿದೆ. ಹೌದು..ವಿಶ್ವದ ಅತಿ ಎತ್ತರದ 405 ಅಡಿಯ ಸುಮೇರು ಪರ್ವತ ಜಿನಬಿಂಬ ಪ್ರತಿಷ್ಠಿತ ಹಾಗೂ ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ ನಡೆಯಲಿದೆ.
61 ಅಡಿ ಎತ್ತರದ ಭಗವಾನ್ ಪಾರ್ಶ್ವನಾಥ ಮೂರ್ತಿಗೆ ಮಹಾಮಸ್ತಕಾಭಿಷೇಕ್ ನೇರವೇರಲಿದ್ದು, ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಚಾಲನೆ ನೀಡಿದರು. ದ್ವಾರ ಉದ್ಘಾಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಹಾಗು ವರೂರ ನವಗ್ರಹ ತೀರ್ಥ ಕ್ಷೇತ್ರದ ಗುಣಧರ ನಂದಿ ಸ್ವಾಮೀಜಿ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಎಂ.ಆರ್ ಪಾಟೀಲ ಸೇರಿದಂತೆ ಹಲವು ಗಣ್ಯರು ಭಾಗಿಯಾದ್ದು, ಇದೇ ಮೊದಲ ಬಾರಿಗೆ ಲೇಸರ್ ಶೋ ಮೂಲಕ ಮಹಾಮಸ್ತಕಾಭಿಷೇಕದ ವಿಶೇಷತೆಯನ್ನ ಸಾರುವ ಎಲ್ಇಡಿ ಪರದೆಗಳ ಅಳವಡಿಸಲಾಗಿದೆ.
ವಿಶ್ವಶಾಂತಿ ಮಹಾಯಜ್ಞದಲ್ಲಿ 9999 ಹವನ ಕುಂಡಗಳು, 27 ವಿಶೇಷ ದ್ರವ್ಯಗಳಿಂದ ಪಾರ್ಶ್ವರ್ನಾಥ ಹಾಗೂ ನವಗ್ರಹ ಒಂಬತ್ತು ತೀರ್ಥಂಕರಿಗೆ ಮಹಾಮಜ್ಜನ ನೆರವರಲಿದೆ. 405 ಸರ್ವಧರ್ಮ ಸಾಧುಗಳಿಂದ ಸರ್ವಧರ್ಮ ಸಮ್ಮೇಳನ ನಡೆಯಲಿದೆ.
12 ದಿನಗಳ ಕಾರ್ಯಕ್ರಮದಲ್ಲಿ, ನವಗ್ರಹ ತೀರ್ಥಾಂಕರ ಮಹಾಮಸ್ತಕಾಭಿಷೇಕದಲ್ಲಿ ಆಚಾರ್ಯರು ಶ್ರೀ, 200ಕ್ಕೂ ಹೆಚ್ಚು ಜೈನ್ ಮುನಿಗಳು ಶ್ರೇಷ್ಠ ಸಂತರು,. ಉಪರಾಷ್ಟ್ರಪತಿ, ರಾಜ್ಯಪಾಲರು, ರಾಜ್ಯ ಸೇರಿದಂತೆ ಹಲವು ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳು ಭಾಗಿಯಾಗಲಿದ್ದು, ಪ್ರತಿದಿನ ಸಂಜೆ, ಖ್ಯಾತ ಸಂಗೀತಕಾರರು, ಕಲಾವಿದರು ಸಂಗೀತ ಹಾಗೂ ಸಾಂಸ್ಕೃತಿಕ ಉತ್ಸವ ನಡೆಸಿಕೊಡಲಿದ್ದಾರೆ.
3ಡಿ ಸಿನಿಮಾದಿಂದ ಅದ್ಭುತ ಪಾರ್ಶ್ವನಾಥ ಪಾತ್ರದ ದರ್ಶನ, ಹೆಲಿಕಾಪ್ಟರ್ ಮೂಲಕ ನವಗ್ರಹ ತೀರ್ಥಂಕರ ಮೇಲೆ ಪುಷ್ಪಾರ್ಚನೆ, ಜೈನ ಸಾಹಿತ್ಯದ ಕಾರ್ಯಕ್ರಮಗಳು, 18 ಆಚಾರ್ಯರ ಸಾನಿಧ್ಯದಲ್ಲಿ 1008 ಮಕ್ಕಳಿಗೆ ಮಂಜಿ ಸಂಸ್ಕಾರ, ನಿತ್ಯವೂ 3333 ಇಂದ್ರ-ಇಂದ್ರಾನಿಯಿಂದ ಪಂಚಕಲ್ಯಾಣ ಅರ್ಚನೆ ಸೇರಿದಂತೆ ಹತ್ತು ಹಲವು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಿತ್ಯವೂ ನಡೆಯಲಿವೆ.
ಭಗವಾನ ಶ್ರೀ ಪಾರ್ಶ್ವನಾಥರ ಮಹಾಮಜ್ಜನಕ್ಕೆ ಕಳೆದ ಐದಾರು ತಿಂಗಳಿನಿಂದ ಪೂರ್ವ ತಯಾರಿಗಳು ಭರ್ಜರಿಯಾಗಿ ನಡೆದಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶಾಲವಾದ ಭವ್ಯ ವೇದಿಕೆ ನಿರ್ಮಿಸಲಾಗಿದೆ., ಸಾವಿರಾರು ಜನರು ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ಅಲ್ಲದೆ ದೊಡ್ಡ ಎಲ್‌ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿಗಳ ಭದ್ರತೆ ಸಾಮಾನ್ಯರ ಭಕ್ತರ ಪಾಲ್ಗೊಳ್ಳುವಿಕೆಗೆ ಪೂರಕವಾಗಿ ಸಿದ್ದಗೊಂಡಿದೆ.
ಒಟ್ಟಿನಲ್ಲಿ ಇಂದಿನಿಂದ ಆರಂಭವಾದ ಕಾರ್ಯಕ್ರಮ 26 ರಂದು ಸಂಪನ್ನಗೊಳ್ಳಲಿದೆ. ನಿತ್ಯವೂ ಗಣ್ಯ ವ್ಯಕ್ತಿಗಳ ಆಗಮನ, ಧಾರ್ಮಿಕ ವಿಧಿವಿಧಾನಗಳು, ಧಾರ್ಮಿಕ ಸಭೆ, ಪ್ರವಚನ, ಗೋಷ್ಠಿಗಳು ನಡೆಯಲಿವೆ. ಸಂಜೆ ವೇಳೆ ನಿತ್ಯವೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಉತ್ಸವ ನಡೆಯಲಿದೆ.
ಸಾಧು ಸಂತರು, ಆಚಾರ್ಯರು, ಖ್ಯಾತ ಕಲಾವಿದರು, ಸಂಗೀತಕಾರರು ಆಗಮಿಸಲಿದ್ದಾರೆ. ವಿದೇಶದಿಂದ ಆಮದು ಮಾಡಿಕೊಂಡು ಹೂವುಗಳಿಂದ ವೇದಿಕೆ ಅಲಂಕಾರ, ಮೆರವಣಿಗೆಯಲ್ಲಿ ಆನೆ, ಕುದುರೆ ಹಾಗೂ 108 ರಥದ ಮಹಾ ಮೆರವಣಿಗೆ ನಡೆಯಲಿದೆ. ನಿತ್ಯ ಒಂದು ಲಕ್ಷ ಜನರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಕಾರ್ಯಕ್ರಮಕ್ಕೆ ಆದ್ದೂರಿ ಚಾಲನೆ ದೊರೆತಿದೆ.
ಕ್ಯಾಮರಾಫರ್ಸನ್ ಗಜಾನನ ಹೂಗಾರ ಜೊತೆಗೆ ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/01/2025 09:42 pm