ಹುಬ್ಬಳ್ಳಿ: ವಿಶ್ವಶಾಂತಿಗಾಗಿ ಇಂದಿನಿಂದ ಮಹಾಮಸ್ತಕಾಭಿಷೇಕ, ಸುಮೇರು ಪರ್ವತ ಲೋಕಾರ್ಪಣೆ ಒಂದು ಐತಿಹಾಸಿಕ ಕಾರ್ಯಕ್ರಮ. ರಾಷ್ಟ್ರಸಂತ ಆಚಾರ್ಯ ಶ್ರೀಗುಣಧರ ನಂದಿ ಮಹಾರಾಜರ ನೇತೃತ್ವದಲ್ಲಿ ಒಳ್ಳೆಯ ಕಾರ್ಯಕ್ರಮ ಇದಾಗಿದೆ. ವರೂರು ಗ್ರಾಮದಲ್ಲಿ ಅತ್ಯಂತ ವಿಶಾಲವಾದ ಪ್ರದೇಶದಲ್ಲಿ ಸುಮೇರು ಪರ್ವತ ನಿರ್ಮಾಣ ಮಾಡಲಾಗಿದೆ. ಇದೊಂದು ಅತ್ಯಂತ ಪುಣ್ಯ ಕ್ಷೇತ್ರ ಆಗಿದೆ ಎಂದು ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ ಅವರು, ನಾಡಿನ ಅನೇಕ ಸಾಧು ಸಂತರು ಇಲ್ಲಿ ನೆರದಿದ್ದು ಸಂತಸದ ವಿಚಾರ. ಧರ್ಮ ಹಾಗೂ ಮೋಕ್ಷಕ್ಕಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಉಚ್ಛವಾದ ಸಂಸ್ಕಾರ ಕಾರ್ಯಕ್ರಮ ಇದಾಗಿದೆ. ಸತ್ಯ, ಅಹಿಂಸಾ ಮಾರ್ಗದಲ್ಲಿ ನಡೆಯುವ ಧರ್ಮ ಜೈನ್ ಧರ್ಮ ಆಗಿದೆ. ಸತ್ಯ ಮಾರ್ಗದಲ್ಲಿ ಮೋಕ್ಷ ಕಾಣಬಹುದು ಎಂಬ ಸಂದೇಶ ಸಾರುತ್ತದೆ. ಜೈನ್ ತೀರ್ಥಂಕರರು ಮಾನವೀಯ ಮೌಲ್ಯಗಳ ಎತ್ತಿ ಹಿಡಿದಿದ್ದಾರೆ ಎಂದ.
ಇದೊಂದು ಕಾರ್ಯಕ್ರಮ ಧರ್ಮ ಜಾಗೃತಿಗೆ ಮಾದರಿ. ಜೈನ್ ಧರ್ಮ ಉಚ್ಛಮಟ್ಟದ ಸಂಸ್ಕಾರ ನೀಡುತ್ತದೆ. ವ್ಯಸನ ಮುಕ್ತ ಜೊತೆಗೆ ಆರೋಗ್ಯ ಯುಕ್ತ ಸಮಾಜ ನಿರ್ಮಾಣಕ್ಕೆ ದಾರಿದೀಪ. ಸಾಂಸ್ಕೃತಿಕ ಪ್ರಾಚೀನಕ್ಕೆ ಈ ಧರ್ಮ ಸೇರಿದೆ. ಜೈನ್ ಧರ್ಮ ಪರೋಪಕಾರಿಯಲ್ಲಿ ಕೈಲಾಸ ಕಾಣುತ್ತದೆ. ಭಗವಾನ್ ಮಹಾವೀರರು ನಾಡಿನ ವಿಶ್ವಶಾಂತಿಗಾಗಿ ಸಂದೇಶ ಸಾರಿದ್ದಾರೆ. ಸನಾತನ ಧರ್ಮ ಪಾಲನೆಗೆ ಜೈನ್ ಧರ್ಮ ತಳಹದಿ ಆಗಿದೆ. ಪಂಚಕಲ್ಯಾಣ ಮಹೋತ್ಸವ ಹಾಗೂ ಸಮೇರು ಪರ್ವತ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಅವರು ಶುಭ ಹಾರೈಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/01/2025 06:40 pm