ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೆಹಲಿ ಜನ ಸುಮೇರು ಪರ್ವತ ನೋಡಲು ವರೂರಿಗೆ ಬರಬೇಕು - ಗುಣಧರನಂದಿ ಮಹಾರಾಜರ ದಿಟ್ಟ ಶೈಕ್ಷಣಿಕ ಹೆಜ್ಜೆ

ಹುಬ್ಬಳ್ಳಿ: ಜೈನ ನವಗ್ರಹ ತೀರ್ಥ ಕ್ಷೇತ್ರದ ಮಹಾಸ್ತಕಾಭಿಷೇಕ ಕಾರ್ಯಕ್ರಮ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರ ಸಂತ ಆಚಾರ್ಯ ಗುಣಧರನಂದಿ‌ ಮಹಾರಾಜರು ಸಂತೋಷ ವ್ಯಕ್ತಪಡಿಸಿದರು.

ಸಭೆಯ ಭಾಷಣದಲ್ಲಿ ಮಾತನಾಡಿದ ಅವರು, ನನಗೆ ತುಂಬಾ ಸಂತೋಷ ಆಗ್ತಿದೆ.‌ ಕರ್ನಾಟಕದಲ್ಲಿ ಗೊಮ್ಮಟೇಶ್ವರ ಬಿಟ್ಟರೆ ಇಲ್ಲಿ ಸುಮೇರು ಪರ್ವತ ನಿರ್ಮಾಣ ಮಾಡಲಾಗಿದೆ. ಶಾಂತಿ, ಸೌಮ್ಯತೆಗೆ ಹೆಸರುವಾಸಿಯಾಗಿರೋದು ಕರ್ನಾಟಕ.‌ ಕರ್ನಾಟಕ ಅಜರಾಮರ ಆಗಬೇಕು ಅಂತ 405 ಅಡಿ ಸುಮೇರು ಪರ್ವತ ನಿರ್ಮಾಣ ಮಾಡಿದ್ದೇನೆ. ಕುತುಬ್ ಮಿನಾರ್ ನೋಡಲು ಹೋಗುವ ಅವಶ್ಯಕತೆ ಇಲ್ಲಾ. ದೆಹಲಿ ಅವರೇ ಇಲ್ಲಿ ಬರ್ಬೇಕು ಅಂತ ನಿರ್ಮಾಣ ಮಾಡಿದ್ದೇನೆ ಎಂದರು.

ನೂರಾರು ಸಂತರು ಸಾವಿರಾರು ಕಿಲೋಮೀಟರ್‌ನಿಂದ ಬಂದಿದ್ದಾರೆ‌‌‌. ವೀರೇಂದ್ರ ಹೆಗಡೆ ನಮ್ಮ ಕರ್ನಾಟಕದ ಮೂರನೇ ಮುಕುಟ. ಸನ್ಯಾಸಿಗಳಿಗೆ ಸೇವೆ ಮಾಡೋದನ್ನ ಧರ್ಮಧಿಕಾರಿಗಳನ್ನ ನೋಡಿ ಕಲಿಬೇಕು‌. ಡಾಕ್ಟರ್ ಆಗ್ಬೇಕು ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡ್ತೇನೆ‌. ಬಡತನ ದೂರ ಆಗ್ಬೇಕು ಅಂದ್ರೆ ಅದಕ್ಕೆ ಪರಿಹಾರ ಅಂದ್ರೆ ಶಿಕ್ಷಣ ಎಂದು ಅವರು ಹೇಳಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/01/2025 06:14 pm

Cinque Terre

15.57 K

Cinque Terre

0

ಸಂಬಂಧಿತ ಸುದ್ದಿ