ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇಂಪಲ್ಸ್ ಪಿಯು ಕಾಲೇಜಿನ ಸಂಸ್ಕೃತಿ-2K25 ಕಾರ್ಯಕ್ರಮ: ವಾರ್ಷಿಕ ಸಮ್ಮೇಳನ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪದವಿಪೂರ್ವ ವಿಜ್ಞಾನ ವಿಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶಿಕ್ಷಣ ಸಂಸ್ಥೆ ಇಂಪಲ್ಸ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ. ಹುಬ್ಬಳ್ಳಿಯಲ್ಲಿ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ‌ ಅಚ್ಚುಮೆಚ್ಚಿನ ಶಿಕ್ಷಣ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳಿಗಾಗಿಯೇ ಸಂಸ್ಕೃತಿ-2K25 ವಾರ್ಷಿಕ‌ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸುವ ಮೂಲಕ ಯಶಸ್ವಿ ಘಟ್ಟವನ್ನು ತಲುಪಿದೆ.

ಹುಬ್ಬಳ್ಳಿಯ ಪೃಥ್ವಿ ಪ್ಯಾರಡೈಸ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿನೂತನ ಹಾಗೂ ವಿಶಿಷ್ಟ ರೀತಿಯಲ್ಲಿ ವಾರ್ಷಿಕ ಸಮ್ಮೇಳನ ಆಚರಣೆ ಮಾಡಲಾಯಿತು. ಹೌದು.. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಆರಂಭದಿಂದಲೂ ಗುಣಮಟ್ಟದ ಶಿಕ್ಷಣ ಹಾಗೂ ಬಹುತೇಕ ಸ್ಪರ್ಧಾತ್ಮಕ ಸಾಧನೆ ಮಾಡುತ್ತ ಬಂದಿರುವ ಇಂಪಲ್ಸ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯವು, ವಿದ್ಯಾರ್ಥಿಗಳ ಭವಿಷ್ಯದ ಕನಸಿನ ಬಹುದೊಡ್ಡ ವೇದಿಕೆ ಕಲ್ಪಿಸಿದೆ. ಈರಮ್ಮ ಶಿವಯೋಗಿಮಠ ಎಜುಕೇಶನ್ ಸೊಸೈಟಿ ಹೆಸರಲ್ಲಿ ಮುನ್ನಡೆಯುತ್ತಿರುವ ಸಂಸ್ಥೆಯ ಸಂಸ್ಕೃತಿ-2K25 ಸಾಕಷ್ಟು ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರೆಸಿಡೆಂಟ್ ಎಸ್.ಎಂ.ಶಿವಯೋಗಿಮಠ, ಐಐಟಿ ಧಾರವಾಡದ ಡೀನ್ ಡಾ.ಶಿವಪ್ರಸಾದ್, ಪ್ರಮೋದ್ ರಾಯಚೂರ್, ಅಕಾಡೆಮಿ ಡೈರೆಕ್ಟರ್ ಎಸ್.ಬಿ.ಹಿರೇಮಠ ಸೇರಿದಂತೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ವಿನೂತನ ರೀತಿಯಲ್ಲಿ ಕಾರ್ಯಕ್ರಮ ಯಶಸ್ವಿಗೊಂಡಿತು.

ಇನ್ನೂ ಐಐಟಿ ಧಾರವಾಡದ ಡೀನ್ ಡಾ.ಶಿವಪ್ರಸಾದ್ ಅವರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಹಾಗೂ ಕಲಿಕೆಯ ಸಾಮರ್ಥ್ಯದ ಜೊತೆಗೆ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಕೂಡ ಅತಿ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ಸಿಗೆ ಮೆರಗನ್ನು ತಂದರು.

ಒಟ್ಟಿನಲ್ಲಿ ಅವಿಸ್ಮರಣೀಯ ಕ್ಷಣಗಳಿಗೆ ಇಂಪಲ್ಸ್ ಪದವಿಪೂರ್ವ ವಿಜ್ಞಾನ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮ ಸಾಕ್ಷಿಯಾಗಿದ್ದು, ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಸಂಪನ್ನಗೊಂಡಿತು. ಅಲ್ಲದೇ ವಿದ್ಯಾರ್ಥಿಗಳ ಕಲಿಕಾ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದಂತೂ ಸತ್ಯ.

Edited By : Manjunath H D
Kshetra Samachara

Kshetra Samachara

13/01/2025 06:02 pm

Cinque Terre

42.8 K

Cinque Terre

0

ಸಂಬಂಧಿತ ಸುದ್ದಿ