", "articleSection": "Politics,Infrastructure", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/295455_1736930097_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarNavalagunda" }, "editor": { "@type": "Person", "name": "9740080658" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವಲಗುಂದ: ಸಾರ್ವಜನಿಕರ ಸಮಸ್ಯೆಗಳ ಕುರಿತು ಎಲ್ಲಾ ಅಧಿಕಾರಿಗಳು ಮೊದಲು ಸರಿಯಾಗಿ ತಿಳಿದುಕೊಳ್ಳಿ, ಆ ಸಮಸ್ಯೆಗಳಿಗೆ ಕೂಡಲೇ ಸಮಯೋಜಿತವಾಗಿ ಮಾಹಿತಿ ...Read more" } ", "keywords": "Node,Hubballi-Dharwad,Public-News,Politics,Infrastructure", "url": "https://publicnext.com/node" }
ನವಲಗುಂದ: ಸಾರ್ವಜನಿಕರ ಸಮಸ್ಯೆಗಳ ಕುರಿತು ಎಲ್ಲಾ ಅಧಿಕಾರಿಗಳು ಮೊದಲು ಸರಿಯಾಗಿ ತಿಳಿದುಕೊಳ್ಳಿ, ಆ ಸಮಸ್ಯೆಗಳಿಗೆ ಕೂಡಲೇ ಸಮಯೋಜಿತವಾಗಿ ಮಾಹಿತಿ ದೊರಕಿಸಿಕೊಡಿ ಎಂದು ಕರ್ನಾಟಕ ಲೋಕಾಯುಕ್ತ ಧಾರವಾಡ ಡಿವೈಎಸ್ಪಿ ವೆಂಕನಗೌಡ ಪಾಟೀಲ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಸಿ ಮಾತನಾಡಿದ ಅವರು ತಾಲೂಕು ಮಟ್ಟದ ಎಲ್ಲಾ ಇಲಾಖಾ ಅಧಿಕಾರಿಗಳು ಈಗಾಗಲೇ ತಮ್ಮ ತಮ್ಮ ಇಲಾಖೆಯ ಮಾಹಿತಿಗಳನ್ನು ಒದಗಿಸಿದ್ದೀರಿ, ನಿಮ್ಮ ಕಚೇರಿಗಳಿಗೆ ನಾವು ಧಿಡೀರ್ ಭೇಟಿ ಕೊಟ್ಟ ಸಂದರ್ಭದಲ್ಲಿ ಕೆಲವು ನ್ಯೂನತೆಗಳು ಕಂಡುಬಂದಿರುತ್ತವೆ ಅವೆಲ್ಲವುಗಳ ಬಗ್ಗೆ ಗಮನ ಹರಿಸಿ ಎಂದರು.
ಈ ವೇಳೆ ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ವೆಂಕನಗೌಡ ಪಾಟೀಲ, ತಹಶೀಲ್ದಾರ ಸುಧೀರ ಸಾವುಕಾರ, ಇಓ ಭಾಗ್ಯಶ್ರೀ ಜಾಹಗೀರದಾರ, ರವೀಂದ್ರ ಕುರುಬಗಟ್ಟಿ, ಸಂತೋಷ ಲಕ್ಕಮ್ಮನವರ, ಶ್ರೀಶೈಲ ಬೀಳಗಿ, ಸಂಜು ಗಾಳಿ, ರಮೇಶ ಪೂಜಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
- ಶಂಕರ ಸುಭೇದಾರಮಠ, ಪಬ್ಲಿಕ್ ನೆಕ್ಸ್ಟ್ ನವಲಗುಂದ.
Kshetra Samachara
15/01/2025 02:04 pm