", "articleSection": "Politics,Infrastructure", "image": { "@type": "ImageObject", "url": "https://prod.cdn.publicnext.com/s3fs-public/378325-1736762746-15.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಸಾವಿನ ಹೆದ್ದಾರಿ ಎಂದೇ ಖ್ಯಾತಿ ಪಡೆದಿದ್ದ ನೂಲ್ವಿ ಬೆಳಗಲಿ ಕ್ರಾಸ್ ಗೆ ಅಂತೂ ಇಂತೂ ಮುಕ್ತಿ ಸಿಕ್ಕಂತಾಗಿದೆ. 12.5 ಕೋಟಿ ವೆಚ್ಚದಲ...Read more" } ", "keywords": "Noolvi-Belagali cross, Keela bridge, Karnataka infrastructure, Union Minister, foundation stone, ₹12.5 crore project, bridge construction, road connectivity, rural development, government initiatives, public works, infrastructure development.,Hubballi-Dharwad,Politics,Infrastructure", "url": "https://publicnext.com/node" }
ಹುಬ್ಬಳ್ಳಿ : ಸಾವಿನ ಹೆದ್ದಾರಿ ಎಂದೇ ಖ್ಯಾತಿ ಪಡೆದಿದ್ದ ನೂಲ್ವಿ ಬೆಳಗಲಿ ಕ್ರಾಸ್ ಗೆ ಅಂತೂ ಇಂತೂ ಮುಕ್ತಿ ಸಿಕ್ಕಂತಾಗಿದೆ. 12.5 ಕೋಟಿ ವೆಚ್ಚದಲ್ಲಿ ಕೇಳ ಸೇತುವೆ ಕಾಮಗಾರಿ ಭೂಮಿ ಪೂಜೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ನೆರವೇರಿಸಿದರು. ಬಹುದಿನಗಳ ಬೇಡಿಕೆಗೆ ಈಗ ಈಡೇರಿದ್ದು, ಜನರಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ.
ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿ ಕ್ರಾಸ್ ಬಳಿಯಲ್ಲಿ ಕಳೆದ ಐದಾರು ವರ್ಷಗಳಲ್ಲಿಯೇ ನೂರಾರು ಸಾವು ನೋವು ಸಂಭವಿಸಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮುತುವರ್ಜಿಯಿಂದ 12.5 ಕೋಟಿ ವೆಚ್ಚದಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ಸಚಿವ ನಿತಿನ್ ಗಡ್ಕರಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೂಮಿ ಪೂಜೆ ನೆರವೇರಿಸಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳೆ ಹೊಸ ಅರ್ಥ ಬಂದಿದ್ದು, ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿನಂದನೆ ಸಲ್ಲಿಸಿದರು.
ಇನ್ನೂ ಪೂನಾ-ಬೆಂಗಳೂರು ರಸ್ತೆಯ ನೂಲ್ವಿ ಕ್ರಾಸನಲ್ಲಿ 12.5 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಸ್ತೆ ಕೇಳಸೇತುವೆ ನಿರ್ಮಾಣ ಭೂಮಿ ಪೂಜೆಯ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ ಕೇಂದ್ರ ಸಚಿವರಿಗೆ ಶಾಸಕ ಎಂ.ಆರ್.ಪಾಟೀಲ ಹಾಗೂ ಗ್ರಾಮಸ್ಥರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಒಟ್ಟಿನಲ್ಲಿ ಬಹುದಿನಗಳ ಜನರ ಬೇಡಿಕೆಗೆ ಈಗ ಫಲ ಸಿಕ್ಕಂತಾಗಿದ್ದು, ಕೂಡಲೇ ಕಾಮಗಾರಿ ಆರಂಭಗೊಂಡು ಜನರು ನಿಟ್ಟುಸಿರು ಬಿಟ್ಟು ಓಡಾಡುವಂತಾಗಬೇಕಿದೆ. ಅಲ್ಲದೇ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಕೇಂದ್ರ ಸಚಿವರಿಗೆ ಜನರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
13/01/2025 03:36 pm