ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಮೇಶ ಭವನದ ಮುಂದೆ ಚರಂಡಿ ಬ್ಲಾಕ್, ರಸ್ತೆಯುದ್ದಕ್ಕೂ ನೀರು

ಹುಬ್ಬಳ್ಳಿ: ಸುಮಾರು ತಿಂಗಳುಗಳಿಂದ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪ ರಮೇಶ ಭವನ ಮುಂಭಾಗದಲ್ಲಿ ಚರಂಡಿ ಬ್ಲಾಕ್ ಆಗಿ ರಸ್ತೆಯುದ್ದಕ್ಕೂ ನೀರು ಹರಿದು ಸಾರ್ವಜನಿಕರು, ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ರಮೇಶ ಭವನ ಪಕ್ಕದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಇದೆ. ಈ ರಸ್ತೆ ದಿನನಿತ್ಯ ಸಾವಿರಾರು ಜನರು ಓಡಾಡುವಂತ ಬಹು ಮುಖ್ಯ ರಸ್ತೆ. ಕಳೆದ 6 ತಿಂಗಳಿಂದ ಇಲ್ಲಿ ಚರಂಡಿ ಪೈಪ್ ಒಡೆದು ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದೆ. ಅಷ್ಟೇ ಅಲ್ದೆ ಬಸ್‌ಗಳು ಕೂಡ ಅಲ್ಲೆ ನಿಲ್ಲುತ್ತವೆ. ಗಬ್ಬು ವಾಸನೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಈ ರಸ್ತೆಯಲ್ಲೇ ಎಲ್ಲ ಜನ ನಾಯಕರು ಓಡಾಡುತ್ತಾರೆ. ಆದ್ರೆ ಯಾರು ಪಾಲಿಕೆ ಸಿಬ್ಬಂದಿಗೆ ಈ ಸಮಸ್ಯೆ ಬಗ್ಗೆ ಗಮನ ಹರಿಸಲು ಹೇಳಿಲ್ಲ.

ಇಲ್ಲಿನ ಜನರು ಪಾಲಿಕೆಗೆ ಎಷ್ಟೋ ಬಾರಿ ದೂರು ನೀಡಿದ್ರು ಕೂಡ ಯಾರು ಈ ಚರಂಡಿ ಸಮಸ್ಯೆಯನ್ನು ಬಗೆ ಹರಿಸುತ್ತಿಲ್ಲ. ಅದೆಷ್ಟೋ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಪಾಲಿಕೆ ಸಿಬ್ಬಂದಿ ಈ ಚರಂಡಿ ಸಮಸ್ಯೆ ಬಗೆ ಹರಿಸಿ ಜನರಿಗೆ ನೆಮ್ಮದಿ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕಾಗಿದೆ.

Edited By : Manjunath H D
Kshetra Samachara

Kshetra Samachara

18/09/2024 07:22 pm

Cinque Terre

10.32 K

Cinque Terre

1

ಸಂಬಂಧಿತ ಸುದ್ದಿ