ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಟಾರ್​​ ಕೊರಿಯೋಗ್ರಫರ್​ ಜಾನಿ ಮಾಸ್ಟರ್ ಗೋವಾದಲ್ಲಿ ಅರೆಸ್ಟ್‌

ಬೆಂಗಳೂರು: ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಕಳೆದ ಕೆಲವು ದಿನಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳಾ ನೃತ್ಯ ನಿರ್ದೇಶಕಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಜಾನಿ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್​​ ಕೊರಿಯೋಗ್ರಫರ್​ ಜಾನಿ ಮಾಸ್ಟರ್ ಅವರನ್ನು ಗೋವಾದಲ್ಲಿ ಅರೆಸ್ಟ್ ಮಾಡಲಾಗಿದೆ.

ಏನಿದು ಘಟನೆ?

ಇತ್ತೀಚೆಗೆ ಬಹುಭಾಷಾ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ ಜಾನಿ ಮಾಸ್ಟರ್​ ವಿರುದ್ಧ ಅತ್ಯಾಚಾರ ಕೇಸ್​ ದಾಖಲಾಗಿತ್ತು. 21 ವರ್ಷದ ಡ್ಯಾನ್ಸರ್​​​ ಜಾನಿ ಮಾಸ್ಟರ್ ವಿರುದ್ಧ ಕೇಸ್​ ನೀಡಿದ್ದರು. ಹಿಂದಿ, ತೆಲುಗು, ಕನ್ನಡ, ತಮಿಳು ಸಿನಿಮಾಗಳಿಗೆ ಮಾತ್ರವಲ್ಲದೆ ಸ್ಟಾರ್​ ನಟರಿಗೆ ಕೊರಿಯೋಗ್ರಫಿ ಮಾಡಿದ ಕೊರಿಯೋಗ್ರಫಿರ್​ ಇದೀಗ ಬಂಧನಕ್ಕೊಳಗಾಗಿದ್ದಾರೆ.

ಡ್ಯಾನ್ಸರ್‌ ಯುವತಿ ಜೊತೆಗೆ ಸ್ಟಾರ್​ ಕೋರಿಯೋಗ್ರಫರ್ ಹಲವು ದೇಶಗಳಿಗೆ ಹೋಗಿದ್ದಾರೆ ಎಂಬ ಸಂಗತಿ ಕೇಳಿಬಂದಿತ್ತು. ಆದರೀಗ ಕಿಚ್ಚ ಸುದೀಪ್​, ಅಪ್ಪು, ಸಲ್ಮಾನ್​ ಖಾನ್​ ಸೇರಿ ಹಲವರಿಗೆ ನೃತ್ಯ ಸಂಯೋಜಿಸಿದ ಜಾನಿ ಮಾಸ್ಟರ್​ ಬಂಧನ ಅಚ್ಚರಿಗೆ ಕಾರಣವಾಗಿದೆ.

ಕಿಚ್ಚ’ ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಚಿತ್ರದ ‘ರಾ ರಾ ರಕ್ಕಮ್ಮ..’ ಹಾಡಿನ ಹುಕ್‌ ಸ್ಟೆಪ್‌ ಮೂಲಕವೇ ಎಲ್ಲರನ್ನು ಕುಣಿಸಿದ್ದ ಜಾನಿ ಮಾಸ್ಟರ್‌, ಸಖತ್ ಫೇಮಸ್ ಆಗಿದ್ದರು. ‘ಯಥಾ ರಾಜ ತಥಾ ಪ್ರಜಾ’ ಸಿನಿಮಾದಲ್ಲಿ ನಟನೆಯನ್ನೂ ಮಾಡಿದ್ದರು.

Edited By : Nirmala Aralikatti
PublicNext

PublicNext

19/09/2024 01:39 pm

Cinque Terre

28.2 K

Cinque Terre

0