ಸ್ಟ್ರೀ 2 ಭಾರತದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಸೃಷ್ಟಿಸಿದೆ.ಹಾರರ್-ಕಾಮಿಡಿ ಈಗ ಭಾರತದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಬಾಲಿವುಡ್ ಚಲನಚಿತ್ರವಾಗಿ ಹೊರಹೊಮ್ಮಿದೆ.ಅಮರ್ ಕೌಶಿಕ್-ನಿರ್ದೇಶನದ ಈ ಸಿನಿಮಾ ಎನಿಮಲ್ ದಾಖಲೆಯನ್ನು ಪುಡಿಗಟ್ಟಿದೆ.ಎನಿಮಲ್ ರೂ 553.87 ಕೋಟಿ ಲಾಭ ಗಳಿಸಿತ್ತು. ಸ್ತ್ರೀ 2, 557.85 ಕೋಟಿ ಸಂಪಾದನೆ ಮಾಡಿ ಎನಿಮಲ್ ದಾಖಲೆಯನ್ನು ಮುರಿದಿದೆ.ಭಾರತದಲ್ಲಿ 640.25 ಕೋಟಿ ರೂಪಾಯಿ ಗಳಿಸಿದ ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾ 640.25 ಕೋಟಿ ರೂಪಾಯಿ ಗಳಿಸಿತ್ತು,ಆ ದಾಖಲೆಯನ್ನು ಸ್ತ್ರೀ ಮುರಿಯುವ ಎಲ್ಲಾ ಸಾಧ್ಯತೆ ಇದೆ.ಈ ವಾರಾಂತ್ಯದಲ್ಲಿ ಸಿದ್ದಾಂತ್ ಚತುರ್ವೇದಿ ಮತ್ತು ಮಾಳವಿಕಾ ಮೋಹನನ್ ಅಭಿನಯದ ಯುಧ್ರಾ ತೆರೆಕಾಣಲಿದ್ದು ಸ್ತ್ರೀ ಓಟಕ್ಕೆ ಸ್ವಲ್ಪ ಬ್ರೇಕ್ ಬೀಳಬಹುದು ಎನ್ನಲಾಗುತ್ತಿದೆ.
PublicNext
19/09/2024 07:11 pm