ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೃಷಿ ಮೇಳ ಆಮಂತ್ರಣ ಪತ್ರಿಕೆಯಲ್ಲಿ ರಿಜಿಸ್ಟ್ರಾರ್‌ ಹೆಸರನ್ನೇ ಕೈಬಿಟ್ಟ ಕೃಷಿ ವಿವಿ!

ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾಗಿದೆ. ಈ ವಿಶ್ವವಿದ್ಯಾಲಯ ನಡೆಸುವ ಕೃಷಿ ಮೇಳ ದೇಶದ ಗಮನ ಸೆಳೆದಿದೆ. ಇದೇ ಸೆ. 21 ರಿಂದ ನಾಲ್ಕು ದಿನಗಳ ಕಾಲ ಕೃಷಿ ಮೇಳ ಜರುಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಆದರೆ, ಈ ಕೃಷಿ ಮೇಳದ ಆಮಂತ್ರಣ ಪತ್ರಿಕೆಯಲ್ಲಿ ರಿಜಿಸ್ಟ್ರಾರ್ ಅವರ ಹೆಸರನ್ನೇ ಕೃಷಿ ವಿವಿ ಕೈ ಬಿಟ್ಟಿದೆ.

ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಕೈಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರಿಜಿಸ್ಟ್ರಾರ್ ಜಯಲಕ್ಷ್ಮೀ, ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲು ಮುಂದಾಗಿದ್ದಾರೆ. ನಾನೂ ಕೂಡ ರಾಜ್ಯಪಾಲರ ಕಚೇರಿಯಿಂದಲೇ ನೇಮಕಗೊಂಡಿದ್ದರೂ ಅನೇಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ. ಈಗ ದೊಡ್ಡ ಕೃಷಿ ಮೇಳ ನಡೆಯುತ್ತಿದ್ದರೂ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಕೈ ಬಿಟ್ಟಿದ್ದು, ಇದನ್ನು ನಾನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ರಿಜಿಸ್ಟ್ರಾರ್ ಜಯಲಕ್ಷ್ಮೀ ತಿಳಿಸಿದ್ದಾರೆ.

ಈ ವಿಷಯವನ್ನು ಕುಲಪತಿ ಪ್ರೊ.ಪಿ.ಎಲ್ ಪಾಟೀಲ ಅವರ ಗಮನಕ್ಕೆ ತಂದರೆ, ಅವರು ತಮಗೇನೂ ಗೊತ್ತಿಲ್ಲವೆಂಬಂತೆ ಆಮಂತ್ರಣ ಪತ್ರಿಕೆಯನ್ನು ಹೊರಳಾಡಿಸಿ ನೋಡಿ ಇದು ಟೆಕ್ನಿಕಲ್ ಇರುವುದರಿಂದ ಅವರ ಹೆಸರು ಹಾಕಲು ಬರುವುದಿಲ್ಲ ಎಂಬ ಸಬೂಬು ನೀಡಿದ್ದಾರೆ.

ಒಟ್ಟಾರೆ ಕೃಷಿ ಮೇಳದ ಹೊತ್ತಲ್ಲೇ ಕೃಷಿ ವಿವಿಯು ರಿಜಿಸ್ಟ್ರಾರ್ ಅವರ ಹೆಸರನ್ನು ಆಮಂತ್ರಣ ಪತ್ರಿಕೆಯಿಂದ ಕೈ ಬಿಟ್ಟು ಹೊಸ ಚರ್ಚೆಗೆ ಗ್ರಾಸ ಒದಗಿಸಿದೆ. ಸದ್ಯ ಆಗಿರುವ ಲೋಪವನ್ನು ಕುಲಪತಿಗಳು ಸಮರ್ಥಿಸಿಕೊಳ್ಳುತ್ತಾರಾ ಅಥವಾ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡುತ್ತಾರಾ ಕಾದು ನೋಡಬೇಕಿದೆ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/09/2024 07:14 pm

Cinque Terre

53.71 K

Cinque Terre

1

ಸಂಬಂಧಿತ ಸುದ್ದಿ