ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಉದ್ದು ಬೆಳೆದ ರೈತರಿಗೆ ಉದ್ದುದ್ದ ಸಂಕಟ ! ಖರೀದಿ ಯಾವಾಗ ?

ಕುಂದಗೋಳ : ನಮಸ್ಕಾರ ರೀ ರೈತಾಪಿ ಮಂದಿ ...

ಈ ಸರ್ಕಾರ ಜನಪ್ರತಿನಿಧಿಗಳು ರೈತಾಪಿ ಜನರ ಅನುಕೂಲಕ್ಕಾಗಿ ಈ ವರ್ಷ ಉದ್ದು ಖರೀದಿ ಕೇಂದ್ರ ಚಾಲೂ ಮಾಡ್ತೀವಿ ಮತ್ತ್ ಕ್ವಿಂಟಾಲ್ ಉದ್ದು ಗರಿಷ್ಠ 7400 ರೂಪಾಯಿ ಕೊಟ್ಟು ಖರೀದಿ ಮಾಡ್ತೀವಿ ಅಂತ್ ಹೇಳ್ಯಾರ್.

ಆದ್ರ್ ! ಇವತ್ತಿಗೂ ಎಲ್ಲಿಯೂ ಉದ್ದು ಖರೀದಿ ಕೇಂದ್ರ ಚಾಲೂ ಆಗಿಲ್ಲಾ, ಅರ್ಜಿನೂ ತಗೋಳಾಕಂತಿಲ್ಲಾ,

ಹಿಂಗ್ಯಾಗಿ, ಕುಂದಗೋಳ ತಾಲೂಕಿನಲ್ಲಿ ಉದ್ದು ಬೆಳೆದಂತಹ ರೈತರು ತಮ್ಮ ಉದ್ದಿನ ಬೆಳೆ ರೋಡ್ ತುಂಬಾ ಉದ್ದುದ್ದ ಬಿಸಿಲಿಗೆ ಹಾಕ್ಕೊಂಡು ಯಾವಾಗ ಖರೀದಿ ಕೇಂದ್ರ ತಗೆತೈತಿ ? ಯಾವಾಗ ಉದ್ದು ಮಾರೋದು ? ಅಂತ್ಹೇಳಿ ಕಷ್ಟಕ್ಕೆ ಸಿಲುಕ್ಯಾರ್.

ಇನ್ನ್ ಎಲ್ಲಿ ಮಟಾ ! ಉದ್ದು ಖರೀದಿ ಕೇಂದ್ರ್ ತಗಿತೈತಿ ಅಂತ್ಹೇಳಿ ಕಾಯಕೊಂತ್ ಕುದ್ರನೂ.

ನಾವ್ ನೋಡು ಮಟಾ ನೋಡಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕ್ತೇವಿ ಅಂತ್ಹೇಳಿ ರೈತರು ಎಚ್ಚರಿಕೆ ಕೊಟ್ಟಾರ್.

ಒಟ್ಟ್ ನೋಡ್ರಿ ರೈತರ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗೋದು ಕಷ್ಟ ಆಗೈತಿ, ಅತಿವೃಷ್ಟಿ ನಡುವೆ ಕಷ್ಟ ಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗಲಾರದ ರೈತರ ಪರಿಸ್ಥಿತಿ ಬಗ್ಗೆ ಸರ್ಕಾರ ಲಕ್ಷ್ಯ ಕೊಡಲಿ ಅಂತ್ಹೇಳಿ ರೈತರು ಮನವಿ ಮಾಡ್ಯಾರ್.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ

Edited By : Manjunath H D
Kshetra Samachara

Kshetra Samachara

18/09/2024 02:01 pm

Cinque Terre

16.01 K

Cinque Terre

0

ಸಂಬಂಧಿತ ಸುದ್ದಿ