ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಧೋಗತಿಯತ್ತ ಎಪಿಎಂಸಿ! ಹುದ್ದೆಗಳು ಖಾಲಿ, ಅಭಿವೃದ್ಧಿಯೂ ನಿಕಾಲಿ

ಕುಂದಗೋಳ : ರೈತರ ಏಳ್ಗೆ ವರ್ತಕರ ವಹಿವಾಟು ಗಮನಿಸಿ ತನ್ನ ವ್ಯಾಪ್ತಿಯ ವಾಣಿಜ್ಯ ಮಳಿಗೆ ಮತ್ತು ಗೋದಾಮುಗಳ ಮೇಲೆ ನಿಗಾ ಇಡಬೇಕಾದ ಕುಂದಗೋಳ ಎಪಿಎಂಸಿ ಕಚೇರಿ ಸಿಬ್ಬಂದಿ ಇಲ್ಲದೇ ಖಾಲಿ ಖಾಲಿಯಾಗಿದೆ.

ಹೌದು ! ಕುಂದಗೋಳ ಪಟ್ಟಣದಲ್ಲಿ 23 ಎಕರೆ ವಿಸ್ತೀರ್ಣ ಹಾಗೂ ಸಂಶಿ ಉಪ ಎಪಿಎಂಸಿ 2 ಎಕರೆ ವಿಸ್ತೀರ್ಣ ಹೊಂದಿರುವ ಮಾರುಕಟ್ಟೆಗೆ ಸರ್ಕಾರದ ಅಧಿಸೂಚನೆ ಪ್ರಕಾರ 13 ಜನ ಅಧಿಕಾರಿ, ಸಿಬ್ಬಂದಿ ಬೇಕು.

ಆದ್ರೇ ! ಕರ್ತವ್ಯದಲ್ಲಿ ಇರೋದು ಮಾತ್ರ 3 ಜನ ಅದರಲ್ಲೂ 2 ಜನ ಅಧಿಕಾರಿಗಳು ಪ್ರಭಾರಿಯಾಗಿ ಕುಂದಗೋಳ ಎಪಿಎಂಸಿ ಕರ್ತವ್ಯದಲ್ಲಿ ಇದ್ದಾರೆ.

ಇನ್ನೂ ಕುಂದಗೋಳ ಎಪಿಎಂಸಿ ಮಾರುಕಟ್ಟೆಯಲ್ಲಿ 3 ಗೋದಾಮು ಹಾಗೂ ಸಂಶಿ ಮಾರುಕಟ್ಟೆಯಲ್ಲಿ 2 ಗೋದಾಮು 5 ವರ್ತಕರ ಮಳಿಗೆ ಹೊಂದಿದ ಎಪಿಎಂಸಿ ಮಳಿಗೆ ಹರಾಜಿನಲ್ಲೂ ಹಲವು ವರ್ಷಗಳಿಂದ ಹಿಂದೆ ಬಿದ್ದಿದೆ.

ಒಟ್ಟಾರೆ ಕುಂದಗೋಳ ಎಪಿಎಂಸಿ ಅಧೋಗತಿಯತ್ತ ಸಾಗುತ್ತಲಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿರುವುದು ರೈತಾಪಿ ವಲಯಕ್ಕೆ ಅನ್ಯಾಯವೇ ಸರಿ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Somashekar
Kshetra Samachara

Kshetra Samachara

18/09/2024 02:41 pm

Cinque Terre

63.91 K

Cinque Terre

0

ಸಂಬಂಧಿತ ಸುದ್ದಿ