ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅವಳಿನಗರದ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪತ್ರ, ಜನರ ಸಮಸ್ಯೆಗಳ ನಿವಾರಣೆಗೆ ಬೇಕಿದೆ ಅನುದಾನ..!

ಹುಬ್ಬಳ್ಳಿ:ಹುಬ್ಬಳ್ಳಿ ಧಾರವಾಡ ಪಾಲಿಕೆ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ಪಾಲಿಕೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ಹಾಗೂ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಕೊರತೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ಹದಗೆಟ್ಟ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆರ್ಥಿಕ ಪರಿಸ್ಥಿತಿ. ನಿವೃತ್ತಿ ನೌಕರರಿಗೂ ಪಿಂಚಣಿ ಹಣ ಕೊಡಲು ಬೊಕ್ಕಸ ಖಾಲಿ‌ ಮಾಡಿಕೊಂಡ ಕುಳಿತ ಪಾಲಿಕೆ. ಈ ನಿಟ್ಟಿನಲ್ಲಿ ಅನುದಾನಕ್ಕಾಗಿ ಸರ್ಕಾರದ ಕಡೆ ಬೊಟ್ಟು ಮಾಡಿದ ಪಾಲಿಕೆ. ಹೌದು.. ಹುಬ್ಬಳ್ಳಿ-ಧಾರವಾಡ ರಾಜ್ಯದಲ್ಲಿಯೇ ಅತಿದೊಡ್ಡ ಎರಡನೇ ಮಹಾನಗರ ಪಾಲಿಕೆ. ಅದು ಕೇವಲ ಹೆಸರಿಗೆ ಮಾತ್ರ ದೊಡ್ಡ ಪಾಲಿಕೆ, ಅಭಿವೃದ್ಧಿಯಲ್ಲಿ ಮಾತ್ರ ಶೂನ್ಯ. ಈಗಾಗಲೇ ಅತಿಯಾದ ಮಳೆಯಿಂದ ಹದಗೆಟ್ಟ ರಸ್ತೆಗಳು, ಸಂಪೂರ್ಣ ತಗ್ಗು ಗುಂಡಿಗಳಿಂದ ಕೂಡಿದ ಹುಬ್ಬಳ್ಳಿ-ಧಾರವಾಡ ರಸ್ತೆಗಳು, ಈ ರಸ್ತೆಯ ತಗ್ಗು ಗುಂಡಿಗಳನ್ನ ಮುಚ್ಚಲು ಪಾಲಿಕೆಯ ಬಳಿ‌ ಇಲ್ಲ ಹಣ. ಪಾಲಿಕೆಗೆ ವಿಶೇಷ ಅನುದಾನ ನೀಡಿ ಎಂದು‌ ಮುಖ್ಯಮಂತ್ರಿಗಳಿಗೆ ಮೇಯರ್ ಪತ್ರ ಬರೆದಿದ್ದಾರೆ.

ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿಗೆ ಹಣ ನೀಡಿ ಎಂದು ಸರ್ಕಾರಕ್ಕೆ ಪತ್ರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ವಿಶೇಷ ಅನುದಾನ ಕೊಟ್ಟು ಪಾಲಿಕೆಯನ್ನ ಬದುಕಿಸಿ ಎಂದು ಮನವಿ ಮಾಡಿದ್ದಾರೆ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/09/2024 03:22 pm

Cinque Terre

44.1 K

Cinque Terre

2

ಸಂಬಂಧಿತ ಸುದ್ದಿ