ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈದ್ ಮಿಲಾದ್ ಮೆರವಣಿಗೆಯಲ್ಲಿ ವಕ್ಫ ಬೋರ್ಡ್ ಕಾಯ್ದೆ ತಿದ್ದುಪಡಿ ವಿರೋಧಿಸಿದ ಮುಸ್ಲಿಂರು

ಧಾರವಾಡ : ಇಂದು ನಾಡಿನಾದ್ಯಂತ ಮುಸ್ಲಿಂರು ಈದ್ ಮಿಲಾದ್ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ಧಾರವಾಡದಲ್ಲೂ ಅಂಜುಮನ್ ಸಂಸ್ಥೆ ವತಿಯಿಂದ ಈದ್ ಮಿಲಾದ್ ಹಬ್ಬದ ಅಂಗವಾಗಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಧಾರವಾಡದ ಅಂಜುಮನ್ ಸಂಸ್ಥೆಯ ಆವರಣದಲ್ಲಿ ಜಮಾವಣೆಗೊಂಡ ನಗರದ ಎಲ್ಲ ಮುಸ್ಲಿಂರು ಅಲ್ಲಿಂದ ಮೆರವಣಿಗೆ ಆರಂಭಿಸಿದರು. ಈ ಮೆರವಣಿಗೆಯಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಕೂಡ ಪಾಲ್ಗೊಂಡಿದ್ದರು.

ಅಂಜುಮನ್ ಸಂಸ್ಥೆಯಿಂದ ಆರಂಭಗೊಂಡ ಮೆರವಣಿಗೆಯು, ಧಾರವಾಡದ ಸುಭಾಷ ರಸ್ತೆ, ಕಾಮನಕಟ್ಟಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಚರಿಸಿ ಮರಳಿ ಅಂಜುಮನ್ ಸಂಸ್ಥೆಗೆ ಬಂದು ಮುಕ್ತಾಯಗೊಂಡಿತು. ಈ ಮೆರವಣಿಗೆಯಲ್ಲಿ ಘೋಷಣೆಗಳು ಮೊಳಗಿದವು, ಬಾವುಟಗಳು ಹಾರಾಡಿದವು.

ಇದೇ ಮೆರವಣಿಗೆಯಲ್ಲಿ ಮುಸ್ಲಿಂರು, ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ ಬೋರ್ಡ್ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿದರು. "ವಕ್ಫ ಆಸ್ತಿ ಅಲ್ಲಾಹುವಿನ ಆಸ್ತಿ", "ವಕ್ಫ ವಿಚಾರದಲ್ಲಿ ನಮಗೆ ನ್ಯಾಯ ಬೇಕು" ಎಂಬ ಪ್ಲೆಕಾರ್ಡ್‌ಗಳನ್ನು ಹಿಡಿದು ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿದರು.

Edited By : Somashekar
Kshetra Samachara

Kshetra Samachara

16/09/2024 04:38 pm

Cinque Terre

31.95 K

Cinque Terre

7

ಸಂಬಂಧಿತ ಸುದ್ದಿ