ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಚೇತನ ಮತ್ತು ಸಚೇತನ ಕಾಲೇಜುಗಳ ವಿದ್ಯಾರ್ಥಿಗಳ ಸಾಧನೆ

ಹುಬ್ಬಳ್ಳಿ : ದ್ಯಾವಪ್ಪನವರ -ವಳಸಂಗ ಎಜ್ಯುಕೇಶನಲ್ ಮತ್ತು ಅಕ್ಯಾಡೆಮಿಕ್ ಟ್ರಸ್ಟನ ವೆಕ್ಟರ್ ಅಕ್ಯಾಡೆಮಿಯ ಸಹಯೋಗದೊಂದಿಗೆ ಚೇತನ ಹಾಗೂ ಸಚೇತನ ಕಾಲೇಜುಗಳ ವಿದ್ಯಾರ್ಥಿಗಳು, ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ), ಆಶ್ರಯದಲ್ಲಿ ಆಯೋಜಿಸಿದ್ದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ "ನಮ್ಮ ಹಿರಿಯರು ಅಂದು ಇಂದು" ಎಂಬ ವಿಷಯದನ್ವಯ ವಾಕ್‌ಚಾತುರ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಚೇತನ ಮತ್ತು ಸಚೇತನ ಕಾಲೇಜಿನ ವಿದ್ಯಾರ್ಥಿಗಳಾದ ಸುನೀತಾ ಶಿವನಗೌಡರ- ಪ್ರಥಮ ಪಿ.ಯು.ಸಿ. (ಪ್ರಥಮ ಸ್ಥಾನ), ಸೃಷ್ಟಿ ಬೆಲ್ಲಮ್ಮಕೊಂಡಿ - ಪ್ರಥಮ ಪಿ.ಯು.ಸಿ. (ದ್ವಿತೀಯ ಸ್ಥಾನ), ಅರ್ಚನಾ ಸಿ. ಕೊಬ್ಬಯ್ಯನವರ - ಪ್ರಥಮ ಪಿ.ಯು.ಸಿ. (ತೃತೀಯ ಸ್ಥಾನ) ಹಾಗೂ ಸಚೇತನ ಕಾಲೇಜಿನ ಕುಮಾರಿ. ಸಕ್ರಮ್ಮ ಹೊರಕೇರಿ - ದ್ವಿತೀಯ ಪಿ.ಯು.ಸಿ (ಪ್ರಥಮ ಸ್ಥಾನ), ಕುಮಾರ. ಶಿವಕುಮಾರ ಕುರುಗುಂದ - ಪ್ರಥಮ ಪಿ.ಯು.ಸಿ. (ದ್ವಿತೀಯ ಸ್ಥಾನ), ಕುಮಾರಿ. ವರ್ಷಾ ಕುಮಾರ ಬೇವಿನಕೊಪ್ಪಮಠ - ಪ್ರಥಮ ಪಿ.ಯು.ಸಿ. (ತೃತೀಯ ಸ್ಥಾನ) ವನ್ನು ಕ್ರಮವಾಗಿ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.

ಈ ವಿದ್ಯಾರ್ಥಿಗಳನ್ನು ಡಿ.ವಿ.ಇ. ಟ್ರಸ್ಟಿನ ಅಧ್ಯಕ್ಷರಾದ ಜಿ. ವಿ. ವಳಸಂಗ, ಕಾರ್ಯದರ್ಶಿಗಳಾದ ಮಹೇಶ ದ್ಯಾವಪ್ಪನವರ, ವೆಕ್ಟರ್ ಅಕ್ಯಾಡೆಮಿಯ ನಿರ್ದೇಶಕರಾದ ಶ್ರೀ ರಮೇಶ ಬಿಂಗಿ, ಶ್ರೀ ಸುನೀಲ ಕಣಬಸ, ಶಂಕರ, ಅಕ್ಯಾಡೆಮಿಕ್ ಹೆಡ್ ಆದ ಹೇಮಾವತಿ ಖಾರ್ವಿ, ಚೇತನ ಹಾಗೂ ಸಚೇತನ ಕಾಲೇಜಿನ ಪ್ರಾಚಾರ್ಯರಾದ ಎಂ. ಪಿ. ಯಡಳ್ಳಿ ಮತ್ತು ಮಹೇಶ ಖುರ್ಸಾಪುರ ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

12/09/2024 07:25 pm

Cinque Terre

27.27 K

Cinque Terre

0

ಸಂಬಂಧಿತ ಸುದ್ದಿ