ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದೂ ಯುವಕರಿಂದ ಖವಾಲಿ, ಮುಸ್ಲಿಂ ಯುವಕರಿಂದ ಗಣಪತಿ ಸಾಂಗ್ : ಸೌಹಾರ್ದತೆಗೆ ಸಾಕ್ಷಿಯಾದ ಸಂಭ್ರಮ

ಹುಬ್ಬಳ್ಳಿ : ಹೂಬಳ್ಳಿಯಲ್ಲಿ ಮೊಗ್ಗು, ಹೂವು, ಎಲೆ, ಹಣ್ಣು ಇರುವಂತೆ ಸಮಾಜದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಶಿಖ್ ಹೀಗೆ ಅದೆಷ್ಟೋ ಧರ್ಮಗಳಿದ್ದರೂ ಹುಬ್ಬಳ್ಳಿಯ ಜನರು ಮಾತ್ರ ನಾವೆಲ್ಲರೂ ಒಂದೇ ತಾಯಿ ಮಕ್ಕಳು ಎಂಬುವಂತ ಸಂದೇಶವನ್ನು ಸಾರಿರುವುದು ನಿಜಕ್ಕೂ ವಿಶೇಷವಾಗಿದೆ.

ಹುಬ್ಬಳ್ಳಿಯ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳು ಪರಸ್ಪರ ಸಹೋದರತ್ವವನ್ನು ಎತ್ತಿ ತೋರಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಜನಮಾನಸದಲ್ಲಿ ಮತ್ತಷ್ಟು ಸೌಹಾರ್ದತೆಯನ್ನು ಎತ್ತಿ ತೋರಿವೆ. ಹೌದು.. ಗಣೇಶ ವಿಸರ್ಜನೆ ವೇಳೆಯಲ್ಲಿ ಕವಾಲಿ ಹಾಡನ್ನು ಹಾಕುವ ಮೂಲಕ ಹಿಂದೂ ಯುವಕರು ಮುಸ್ಲಿಂ ಪ್ರವಾದಿ ಮುಹಮ್ಮದರ ಗೌರವ ನಮನ ಸಲ್ಲಿಸಿದ್ದು, ಅದೇ ರೀತಿಯಲ್ಲಿ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಗಣೇಶ ಪೆಂಡಾಲ್ ಮುಂದೆ ಮುಸ್ಲಿಂ ಯುವಕರು ಗಣಪತಿ ಹಾಡನ್ನು ಹಾಕುವ ಮೂಲಕ ವಿಘ್ನೇಶ್ವರನಿಗೆ ಗೌರವ ಸಮರ್ಪಣೆ ಮಾಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ನಾವೆಲ್ಲರೂ ಒಂದೇ ಎಂಬುವ ಸಂದೇಶವನ್ನು ಸಾರಿದ್ದಾರೆ.

ಬಹುತೇಕ ಕಡೆಯಲ್ಲಿ ಕೋಮುವಾದ ಗಲಾಟೆ ನಡೆಯುತ್ತಿರುವ ಮಧ್ಯದಲ್ಲಿ ಹುಬ್ಬಳ್ಳಿಯ ಜನರು ಇಂತಹದೊಂದು ಸೌಹಾರ್ದತೆಗೆ ಸಾಕ್ಷಿಯಾಗಿರುವುದು ನಿಜಕ್ಕೂ ಭಾರತದ ಪರಂಪರೆಗೆ ಸೂಕ್ತ ನಿದರ್ಶನವಾಗಿದ್ದಾರೆ.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/09/2024 02:50 pm

Cinque Terre

41.01 K

Cinque Terre

12

ಸಂಬಂಧಿತ ಸುದ್ದಿ