ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಪುಣೆ- ಮುಂಬೈ ರೀತಿಯಲ್ಲಿ ಭರ್ಜರಿ ಗಣೇಶ ವಿಸರ್ಜನೆ ಕಾರ್ಯಕ್ರಮ

ಹುಬ್ಬಳ್ಳಿ : ನಿನ್ನೆ ಹುಬ್ಬಳ್ಳಿಯ ನ್ಯೂ ಮ್ಯಾದಾರ ಓಣಿಯಲ್ಲಿ ಮುಂಬೈ ಗಣಪತಿ ನೆನಪಾಗುವಂಗ್ ಕಾರ್ಯಕ್ರಮ ಮಾಡಿದ್ರ್ ಇಲ್ಲಿಗೆ ಬಂದ್ ಮಂದಿ ನಾವ್ ಮುಂಬೈನ್ಯಾಗ್ ಅದೇವಿ... ಅನ್ನುವಂಗ್ ಫಿಲ್ ಮಾಡ್ಯಾರ್...

ಹೌದ್ ನ್ಯೂ ಮ್ಯಾದಾರ ಓಣಿಯ ಸಪ್ತ ಸಾಮ್ರಾಟ್ ಮಹಾ ಗಣಪತಿಯ ವಿಸರ್ಜನಾ ಕಾರ್ಯಕ್ರಮದಲ್ಲಿ ಗಿಚ್ಚ DC ಹಚ್ಚಿ ಮಸ್ತ್ ಗಣೇಶನ ದರ್ಶನ ಜೊತೆಗೆ DJ enjoy ಮಾಡ್ಯಾರ್...

ಅದರನ್ಯಾಗು... ಹಲವಾರು ವರ್ಷಗಳಿಂದ ಗಣೇಶನ ಅಪಟ್ಟ ಭಕ್ತರಾದ ಸಾವಂತ್ ಕುಟುಂಬದವರು ಬಂದು ಗಣೇಶನಿಗೆ ಪೂಜೆ ಸಲ್ಲಿಸಿದ ಮ್ಯಾಗ್... ಈ ಕಾರ್ಯಕ್ಕೆ ಇನ್ನೂ ಹೆಚ್ಚಿನ ಕಳೆಕಟ್ಟಿದಂಗಾಗಿತ್ತು ಎಂದರೇ ಅತಿಶಯೋಕ್ತಿಯಲ್ಲ‌...

ಹಾಗೇಯೇ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ಪೋಲಿಸ್ ಡಿ.ಸಿ.ಪಿ. ಸಾಹೇಬ್ರ್ ಯವರು ಮೆಚ್ಚುಗೆ ವ್ಯಕ್ತಪಡಿಸಿ ಏನ್ ಅಂದ್ರ ನೀವ ಕೇಳ್ರೀ....

ನ್ಯೂ ಮ್ಯಾದಾರ ಓಣಿಯ ಶ್ರೀ ಸಪ್ತ ಸಾಮ್ರಾಟ್ ಮಹಾ ಗಣಪತಿಯ ಉತ್ಸವ ನೋಡುದಕ್ ಜನಸಾಗರ ಹರೆದುಬಂದಿತ್ತು. ಒಟ್ಟಾರೆ ಎಗದಂ ಮಸ್ತ್ ಗ ಗಿಚ್ಚ DJ ಹಚ್ಚಿ ಮಂದಿ ಕುಣಿದ್ ಕುಪ್ಪಲಿಸಿ‌... ಗಣೇಶನ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Edited By : Vinayak Patil
Kshetra Samachara

Kshetra Samachara

18/09/2024 07:48 pm

Cinque Terre

27.55 K

Cinque Terre

6

ಸಂಬಂಧಿತ ಸುದ್ದಿ