ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಮ್ಸ್ ದವಾಖಾನ್ಯಾಗ್ ಟ್ರೀಟ್ಮೆಂಟ್ ಯಾಕ್ ಕೊಟ್ಟಿಲ್ಲ ಅಂತ ಕೇಳಿದ್ರ ಕೇಸ್ ಹಾಕ್ತಾರ್ ಅಂತ : ಲಾಡ್ ಸಾಹೇಬ್ ತುಮಾರ್ ಕ್ಯಾಬಿ ನಹೀ ಚಲ್ತಾ ಇದರ

ಹುಬ್ಬಳ್ಳಿ : ನಮ್ಮ ಹುಬ್ಬಳ್ಳಿ ಕಿಮ್ಸ್ ದವಾಖಾನ್ಯಾಗ್ ಗಂತು ಹೇಳೋರು ಇಲ್ಲ ಕೇಳೋರು ಯಾರು ಇಲ್ಲ ಇಲ್ಲ.ಮಿನಿಸ್ಟರ್ ಅವರ ಇವರ್ ಬಂದಾಗ ಸ್ವಲ್ಪ್ ಬಯ್ಯತಾರ ಅವಾಗ ಇನ್ನ ಮ್ಯಾಲ್ ಸರಿ ಮಾಡ್ತೀವಿ ತಗೋರಿ ಅಂತ ಹೇಳಿ ಕಳಿಸಿದ್ರ ಮುಗಿತ್ ನೋಡ್ರಿ. ಮತ್ತ ತಮ್ಮ ಹಳೆ ಚಾಳಿ ಬೀಡುಂಗಿಲ್ಲ ಇವರ್ ಅದೇನೋ ಅಂತಾರ್ ಅಲ್ಲ ಎಸ್ಟ್ ಸೀದಾ ಮಾಡಿದ್ರು ಅದರ ಬಾಲ್ ಡೊಂಕ್ ಅಂತಾ ಹಂಗ್ ಆಗೇತಿ ನೋಡ್ರಿ ಅದರಾಗು ಎಮರ್ಜೆನ್ಸಿ ವಾರ್ಡ್ ನ್ಯಾಗ್.

ಮಂಗಳವಾರ ರಾತ್ರಿ ಮ್ಯಾದಾರ್ ಓನ್ಯಾಗ್ ಬಡದಾಟ ಆಗಿ ರಾಘವೇಂದ್ರನ ಕಿಮ್ಸ್ ದವಾಖಾನಿಗೆ ಕರಕೊಂಡ ಹೋಗ್ಯಾರ್ ಅಲ್ಲಿ ಚೀಟಿನು ಮಾಡಿಸ್ಯಾರ್ ಆದ್ರ ಡಾಕ್ಟ್ರ ಲಗುನ್ ಬಂದ್ ಟ್ರೀಟ್ಮೆಂಟ್ ಕೊಟ್ಟಿಲ್ಲ.ಹೀಂಗಾಗಿ ಅಲ್ಲಿದವರ ಮೊಬೈಲ್ ತಗೊಂಡ್ ವಿಡಿಯೋ ಮಾಡಾಕ್ ಹೋಗ್ಯಾರ್. ಆಗ ಅಲ್ಲಿ ಇದ್ದ ಇನ್ನೊಬ್ಬ ಡಾಕ್ಟ್ರಮ್ಮಾ ಏ ಹೀಂಗೆಲ್ಲಾ ಮಾಡಿದ್ರ ನಿನ್ನ ಮ್ಯಾಲ ಕೇಸ್ ಹಾಕ್ತಿನಿ ಅಂತಾ ಹೆದರಿಕಿ ಹಾಕ್ಯಾರ್ ನೋಡ್ರಿ.

ನೋಡ್ರಿ ಎಂತಾ ಕಾಲ್ ಐತಿ ಈ ಡಾಕ್ಟ್ರ್ ನೆಟ್ಟಗ್ ಪೇಸೆಂಟ್'ಗೆ ಟ್ರೀಟ್ಮೆಂಟ್ ಕೊಟ್ಟಿದ್ರ ಅವರಾದ್ರು ಯಾಕ್ ವಿಡಿಯೋ ಮಾಡ್ತಿದ್ರ. ಮೊದಲ ತಮ್ಮ ಕೆಲ್ಸಾ ನೆಟ್ಟಗ್ ಮಾಡೋದು ಬಿಟ್ಟು ಹೀಂಗ್ಯಾಕ್ ಮಾಡಿದ್ರಿ ಅಂತಾ ಕೇಳೋರ್ ಮ್ಯಾಲ್ ಕೇಸ್ ಹಾಕ್ತಿವಿ ಅಂತಾ ಅಂಜಕಿ ಹಾಕ್ತಿರಿ ಅಲ್ಲ ಒಂದ ವೇಳೆ ಆ ಪೇಸೆಂಟ್ ಗೆ ಚಂದಂಗೆ ಟ್ರೀಟ್ಮೆಂಟ್ ಸಿಗದ ಸತ್ತರ್ ನಾವ್ ಯಾರ್ ಮ್ಯಾಲ್ ಕಂಪ್ಲೇಟ್ ಕೊಡಬೇಕ್ ಹೇಳ್ರಿ ಹಂಗಾರ್.

ಡೈರೆಕ್ಟರ್ ಕಮ್ಮಾರ ಸಾಹೇಬ್ರು ಮೊದಲ ನಿಮ್ಮ್ ಸಿಬ್ಬಂದಿಗೆ ನೆಟ್ಟಗ್ ದವಾಖಾನ್ಯಾಗ್ ಕೆಲ್ಸಾ ಮಾಡಾಕ್ ಹೇಳ್ರಿ ಅದನ್ನ ಬಿಟ್ಟ ಕೇಳಿದವರ ಮ್ಯಾಲ್ ನಿನ್ನ ಮ್ಯಾಲ್ ಕೇಸ್ ಹಾಕ್ತಿನಿ ಅದನ್ನ ಮಾಡ್ತೀನಿ ಅನ್ನುದ್ ಬೀಡ್ ಅನ್ನರಿ. ಹಂಗ್ ಸಂತೋಷ್ ಲಾಡ್ ಸಾಹೇಬ್ರ ನೀವು ಇಲ್ಲಿ ಬಂದಾಗ ಬರೆ ಬೈದು ಹೋಗುದಲ್ಲ ಒಂದಿಬ್ಬರನ ಸಸ್ಪೆಂಡ್ ಮಾಡಿ ಒಗಿರಿ ಆವಾಗ ಇವರ್ ದಾರಿಗೆ ಬರ್ತಾರ್.

ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/09/2024 12:02 pm

Cinque Terre

40.99 K

Cinque Terre

12

ಸಂಬಂಧಿತ ಸುದ್ದಿ