ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹದಗೆಟ್ಟ ಪಿ.ಬಿ ರಸ್ತೆ ಪಶು ವೈದ್ಯಕೀಯ ಆಸ್ಪತ್ರೆ, ಸೂಕ್ತ ವ್ಯವಸ್ಥೆಗಳ ಕೊರತೆ

ಹುಬ್ಬಳ್ಳಿ: ಮನುಷ್ಯರ ಜೀವನದಂತೆ ಪ್ರಾಣಿಗಳ ಜೀವನ ಕೂಡ ಒಂದೇ. ಪ್ರಾಣಿಗಳು ಅನಾರೋಗ್ಯದಿಂದ ಬಳಲುತ್ತಿದ್ರೆ ಹೋಗಬೇಕಾಗಿದ್ದು ಪಶು ವೈದ್ಯಕೀಯ ಆಸ್ಪತ್ರೆಗೆ. ಆದ್ರೆ ಅದೇ ಆಸ್ಪತ್ರೆಯಲ್ಲಿ ಸೂಕ್ತವಾದ ವ್ಯವಸ್ಥೆ ಇಲ್ಲದಂತಾಗಿದೆ. ಅಷ್ಟಕ್ಕೂ ಆ ಆಸ್ಪತ್ರೆ ಯಾವುದು ಅಂತೀರಾ ಇಲ್ಲಿದೆ ನೋಡಿ..

ಹೌದು,,, ಸುಮಾರು ವರ್ಷಗಳ ಹಿಂದೆ ಕಟ್ಟಿದ ಪಶು ಆಸ್ಪತ್ರೆ .ಈ ಆಸ್ಪತ್ರೆಯ ಮುಂದೇನೆ ಕೆಸರು, ಎಲ್ಲಿ ನೋಡಿದರೂ ಗಲೀಜು ಹಾಗೂ ಸ್ವಚ್ಚತೆ ಇಲ್ಲ. ಸೂಕ್ತವಾದ ಔಷಧಿಗಳಿಲ್ಲ. ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಹುಬ್ಬಳ್ಳಿಯ, ಪಿ‌.ಬಿ ರಸ್ತೆಯಲ್ಲಿರುವ ಪಾಲಿಕೆಯ ಜುನಲ್ 11 ರ ಹಿಂಭಾಗದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆ. ಅದೆಷ್ಟೋ ಪ್ರಾಣಿ ಪ್ರಿಯರು ತಮ್ಮ ಪ್ರೀತಿಯ ನಾಯಿಮರಿ, ಹಸು ಹಾಗೂ ಇತರ ಪ್ರಾಣಿಗಳ ಚಿಕಿತ್ಸೆಗೆಂದು ಹುಬ್ಬಳ್ಳಿ ಪಶು ಸಂಗೋಪನೆ ಹಾಗೂ ಚಿಕಿತ್ಸಾ ಕೇಂದ್ರಕ್ಕೆ ಬರುತ್ತಾರೆ. ಅದೆಷ್ಟೋ ಸಾರಿ ಇಲ್ಲಿನ ಅಧಿಕಾರಿಗಳು ಸರಕಾರಕ್ಕೆ ಕಟ್ಟಡದ ಅವ್ಯವಸ್ಥೆ ಬಗ್ಗೆ ಹಾಗೂ ಇತರ ಸಮಸ್ಯೆ ಕುರಿತು ಪತ್ರ ಹಾಗೂ ಮನವಿ ಮಾಡಿದ್ದಾರೆ. ಆದ್ರೆ ಇದುವರೆಗೂ ಸಮಸ್ಯೆ ಮಾತ್ರ ಬಗೆ ಹರಿದಿಲ್ಲ. ಇನ್ನು ಇಲ್ಲಿಗೆ ಚಿಕಿತ್ಸೆಗೆ ಬರುವ ಪ್ರಾಣಿಗಳಿಗೆ ಹೆಚ್ಚಿನ ಚಿಕಿತ್ಸೆ ಹಾಗೂ ಮೆಡಿಸಿನ್ ಕೊರತೆ ಎದ್ದು ಕಾಣುತ್ತಿದೆ. ಈ ಕುರಿತು ಅಧಿಕಾರಿಗಳು ಏನು ಹೇಳಿದ್ದಾರೆ ಕೇಳಿ.

ಒಟ್ಟಿನಲ್ಲಿ ಸರಕಾರಿ ಆಸ್ಪತ್ರೆ ಅಂತ ಸಂಬಂಧಿಸಿದ ಅಧಿಕಾರಿಗಳು ಕೈ ಕಟ್ಟಿ ಕುಳಿತುಕೊಳ್ಳಬಾರದು‌. ಹೆಚ್ಚಿನ ಚಿಕಿತ್ಸೆ ಹಾಗೂ ಇತರ ಸಾಮಗ್ರಿಗಳ ಕೊರತೆ ಬಗ್ಗೆ ಸ್ವತಃ ಅಲ್ಲಿನ ವೈದ್ಯರೇ ಹೇಳಿದ್ದು ಈಗ ಅಲ್ಲಿನ ಸಮಸ್ಯೆ ಬಗೆಹರಿಸುವ ಕೆಲಸವನ್ನು ಮಾಡಲಿ ಎಂಬುದೇ ಎಲ್ಲರ ಒತ್ತಾಯ ಆಗಿದೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

10/09/2024 02:07 pm

Cinque Terre

41.94 K

Cinque Terre

0

ಸಂಬಂಧಿತ ಸುದ್ದಿ