ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಬಹುಮತ ಇದ್ದರೂ ಕೈ ಜಾರಿದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ..!

ಹಾವೇರಿ : ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಬಿಜೆಪಿ‌ ಪಾಲಾಗಿದ್ದು ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ನಗರಸಭೆಯಲ್ಲಿ ಬಹುಮತ ಇದ್ದರು ಸಹ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಗದ್ದುಗೆ ಕಾಂಗ್ರೆಸ್ ಕೈ ತಪ್ಪಿದೆ.

ಬಿಜೆಪಿ ಅಭ್ಯರ್ಥಿ ಶಶಿಕಲಾ ರಾಮು ಮಾಳಗಿ 17 ಮತ ಪಡೆದು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಲ್ಲಿಕಾರ್ಜುನ ಸಾತೇನಹಳ್ಳಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸಂಸದ ಬೊಮ್ಮಾಯಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರೇಣುಕಾ 11 ಮತ ಪಡೆದು ಪರಾಜಿತರಾಗಿದ್ದಾರೆ. ಮತದಾನ ಪ್ರಕ್ರಿಯಲ್ಲಿ ಕಾಂಗ್ರೆಸ್ ನ 6 ಸದಸ್ಯರು ಗೈರಾಗುವ ಮೂಲಕ ಹಾವೇರಿ ನಗರಸಭೆ ಬಿಜೆಪಿಗೆ ತೆಕ್ಕೆಗೆ ಸೇರಲು ಪರೋಕ್ಷವಾಗಿ ನೆರವಾದರು.

Edited By : Shivu K
PublicNext

PublicNext

04/09/2024 09:08 pm

Cinque Terre

53.09 K

Cinque Terre

5

ಸಂಬಂಧಿತ ಸುದ್ದಿ