ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಕಾಂಗ್ರೆಸ್‌ ನಿಂದ ಓಲೈಕೆ ರಾಜಕಾರಣ- ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾಮೋಹನ ಅಸಮಾಧಾನ

ಹಾವೇರಿ: ರಾಜ್ಯದಲ್ಲಿ ಒಂದು ಕೋಮಿನ ಓಲೈಕೆ ರಾಜಕಾರಣ ನಡೆಯುತ್ತಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾಮೋಹನ ದಾಸ್ ಅಗರವಾಲ್ ಆರೋಪಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಬಳಿಕ ನಾಗಮಂಗಲ ಪ್ರಕರಣ ಅಷ್ಟೇ ಅಲ್ಲ, ಹಲವು ಪ್ರಕರಣಗಳು ನಡೆದಿವೆ ಎಂದರು.

ರಾಜ್ಯಸಭೆ ಸದಸ್ಯರು ಗೆದ್ದ ಬಳಿಕ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದರು. ಧಾರ್ಮಿಕ ಉತ್ಸವ ಶ್ರೀಗಣೇಶ ಹಬ್ಬದ ಆಚರಣೆ ವೇಳೆ ಗಲಾಟೆ ಮಾಡಲಾಗಿದೆ. ಒಂದು ಕೋಮಿನ ಜನರು ಬಂದು ಗಲಾಟೆ ಮಾಡೋದು ಸರೀನಾ!? ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡ್ತಿದೆ ಎಂದು ಅಗರವಾಲ್ ಆರೋಪಿಸಿದರು.

ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕಕ್ಕೆ ಹೋದ್ರೂ ಹಿಂದೂಗಳಿಗೆ, ಭಾರತಕ್ಕೆ, ಸಿಖ್ಖರಿಗೆ ಬೈತಾರೆ. ಜಾತಿ-ಜಾತಿಗಳ ಮಧ್ಯೆ ಗಲಾಟೆ ಹಚ್ತಿರೋದೇ ಕಾಂಗ್ರೆಸ್ ನವರು ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By : Ashok M
PublicNext

PublicNext

14/09/2024 10:02 am

Cinque Terre

25.73 K

Cinque Terre

0

ಸಂಬಂಧಿತ ಸುದ್ದಿ