ಶಿಗ್ಗಾಂವ್ : ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಬಂಕಾಪುರದಲ್ಲಿ ತೋಪಿನ ದುರ್ಗಾದೇವಿ ಜಾತ್ರೆ ನಡೆಯಿತು. ಈ ಜಾತ್ರೆಯಲ್ಲಿ ಯಾವುದೇ ಪ್ರಾಣಿಬಲಿ ನೀಡುವುದಿಲ್ಲ. ಇಲ್ಲಿಗೆ ಬರುವ ಭಕ್ತರು ದೇವಿಗೆ ಮಾಂಸಾಹಾರ ನೈವೇದ್ಯ ಹಿಡಿಯುವುದಿಲ್ಲ.
ದೇವಿಗೆ ಪ್ರಾಣಿ ಬಲಿ ಬದಲು ಸಿಹಿ ಪದಾರ್ಥವನ್ನು ಅರ್ಪಿಸಲಾಗುತ್ತದೆ. ಮಾದಲಿ,ಗೋದಿಹುಗ್ಗಿ ಬೊಂದಿ ಸೇರಿದಂತೆ ಸಿಹಿ ಪದಾರ್ಥಗಳಿಂದ ದೇವಿಗೆ ನೈವೇದ್ಯ ಹಿಡಿದರೆ ಶ್ರೀದುರ್ಗಾದೇವಿ ಪ್ರಸನ್ನಳಾಗುತ್ತಾಳೆ ಎನ್ನುತ್ತಾರೆ ಇಲ್ಲಿಯ ಭಕ್ತರು.
1987ರಿಂದ ಇಲ್ಲಿ ಜಾತ್ರೆ ಆಯೋಜಿಸಿಕೊಂಡು ಬರಲಾಗುತ್ತಿದೆ. ಯಾವುದೇ ಅಡೆತಡೆಯಿಲ್ಲದೆ ಜಾತ್ರೆ ನಡೆಯುತ್ತಾ ಬಂದಿದೆ. ಮೂರು ದಿನಗಳ ಕಾಲ ಜಾತ್ರೆ ಅಂಗವಾಗಿ ಆಯೋಜಿಸುವ ಬಯಲು ಜಂಗೀ ಕುಸ್ತಿ ಪಂದ್ಯಾವಳಿ ನೋಡುಗರ ಮೈ ನವಿರೇಳಿಸುತ್ತದೆ.
PublicNext
14/01/2025 04:31 pm