ಹಾವೇರಿ: ಉತ್ತರ ಕರ್ನಾಟಕದ ಜಾತ್ರೆಗಳ ಆರಂಭಿಕ ಜಾತ್ರೆ ಎಂದು ಕರೆಯುವ ಹಾವೇರಿ ಹುಕ್ಕೇರಿಮಠ ಜಾತ್ರೆ ಆರಂಭವಾಗಿದೆ. ಐದು ದಿನಗಳ ಕಾಲ ಈ ಮಠದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತವೆ.
ಮಠಕ್ಕೆ ಬರುವ ಭಕ್ತರಿಗಾಗಿ ಮಠದಲ್ಲಿ ವೈವಿಧ್ಯಮಯ ಆಹಾರ ಸಿದ್ಧಪಡಿಸಲಾಗುತ್ತಿದೆ. ಐದು ದಿನಗಳ ಕಾಲ ಮತ್ತು ಕೊನೆಯ ಎರಡು ದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಮಠಕ್ಕೆ ಬರುವ ಭಕ್ತರ ಹಸಿವು ನೀಗಿಸಲು ಮಠದಲ್ಲಿ ಭಕ್ಷ್ಯಭೋಜನಗಳನ್ನು ಸಿದ್ದಪಡಿಸಲಾಗುತ್ತದೆ.
ಮುಂಜಾನೆಯ ಉಪಹಾರ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಉತ್ತರ ಕರ್ನಾಟಕದ ತಿನಿಸುಗಳನ್ನು ಸಿದ್ದಪಡಿಸಲಾಗುತ್ತಿದೆ. ಅದರಲ್ಲೂ ಖಡಕ್ ರೊಟ್ಟಿ, ಚಪಾತಿ, ಬದನೆಕಾಯಿ ಎಣಗಾಯಿ, ಕಾಳುಗಳ ಪಲ್ಯೆ ಜೊತೆಗೆ ಬೂಂದಿ, ಗೋಧಿ ಹುಗ್ಗಿ, ಮಾದಲಿ, ಖರ್ಚಿಕಾಯಿ ಸೇರಿದಂತೆ ವಿವಿಧ ಸಿಹಿತಿನಿಸು ಸಿದ್ಧಪಡಿಸಲಾಗುತ್ತಿದೆ.
PublicNext
08/01/2025 11:20 am