ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ಜ14 ಮತ್ತು 15ರಂದು ಶರಣ ಸಂಸ್ಕೃತಿ ಉತ್ಸವ

ಹಾವೇರಿ : ಇದೇ 14 ಮತ್ತು 15 ರಂದು ಅಂಬಿಗರ 7ನೇ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತ ಭೀಷ್ಮಚೌಡಯ್ಯ ಸ್ವಾಮಿಜಿ ತಿಳಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು ಶರಣ ಸಂಸ್ಕೃತಿ ಉತ್ಸವದ ಜೊತೆಗೆ ವಚನಗ್ರಂಥ ಮಹಾರಥೋತ್ಸವ ನಡೆಸಲಾಗುವದು. 15 ರಂದು ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.

14 ರಂದು ಮಂಗಳವಾರ ಸುಮಂಗಲೆಯರಿಂದ ನಿಜಶರಣ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವ ನಡೆಯಲಿದೆ, ಇದೇ ವೇಳೆ ನಿಜಶರಣ ಅಂಬಿಗರ ಚೌಡಯ್ಯನವರ ಮೂಲ ಐಕ್ಯಮಂಟಪಕ್ಕೆ ಪೂಜೆ ಸಲ್ಲಿಸಲಾಗುವದು. ನಂತರ ರಕ್ತದಾನ ಶಿಬಿರದಲ್ಲಿ ಹಲವಾರು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ಶಾಂತಭೀಷ್ಮಶ್ರೀಗಳು ತಿಳಿಸಿದರು.

ಜನೇವರಿ 15 ರಂದು ಬುಧವಾರ ಮುಂಜಾನೆ ಧರ್ಮ ಧ್ವಜಾರೋಹಣ ನಡೆಯಲಿದ್ದು, ಧರ್ಮಸಭೆ ನಡೆಸುವ ಮೂಲಕ ಅಂಬಿಗರ 7ನೇ ಶರಣ ಸಂಸ್ಕೃತಿ ಉತ್ಸವ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯರ 905ನೇ ಜಯಂತೋತ್ಸವ ಮತ್ತು ಜಗದ್ಗುರು ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿಗಳ 9ನೇ ಪೀಠಾರೋಹಣದ ವಾರ್ಷಿಕ ಮಹೋತ್ಸವ ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು. ಆದಾದ ನಂತರ ವಚನಗಳ ಮಹಾರಥೋತ್ಸವ ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು.

Edited By : Somashekar
PublicNext

PublicNext

09/01/2025 12:12 pm

Cinque Terre

21.71 K

Cinque Terre

0

ಸಂಬಂಧಿತ ಸುದ್ದಿ