ಹಾವೇರಿ : ಬಿಜೆಪಿಯವರಿಗೆ ಹೋರಾಟ ಮಾಡುವುದು ಬಿಟ್ಟು ಬೇರೆ ಏನು ಗೊತ್ತಿದೆ? ಒಮ್ಮೆಯಾದರೂ ಅವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರಾ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಪ್ರಶ್ನಿಸಿದ್ದಾರೆ.
ಹಾವೇರಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಮಾತನಾಡುತ್ತಿದ್ದರು. ಇದೇ ವೇಳೆ ಬಸ್ ದರ ಏರಿಕೆ ಸಮರ್ಥನೆ ಮಾಡಿಕೊಂಡ ಸಚಿವ ಶಿವಾನಂದ ಪಾಟೀಲ್ ನೆರೆ ರಾಜ್ಯ ಆಂಧ್ರದಲ್ಲಿ ಅಧಿಕ ದರವಿದೆ. ತಮಿಳುನಾಡಿನಲ್ಲೂ ನಮಗಿಂತ ಹೆಚ್ಚಿದೆ ನಮ್ಮದೇ ಚೀಪೆಸ್ಟ್ ಇದೆ ಎಂದು ತಿಳಿಸಿದರು.
ಮಹಿಳೆಯರಿಗೆ ಉಚಿತ ನೀಡಿ ಪುರುಷ ಪ್ರಯಾಣಿಕರಿಂದ ಅಧಿಕ ಹಣ ಪಡೆಯೋದು ಎಷ್ಟು ಸರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಶಕ್ತಿ ಯೋಜನೆಯಲ್ಲಿ ಬಡವರನ್ನ ಓಡಾಡಿಸ್ತಿದ್ದೇವೆ ಅಂದರೆ ಶ್ರೀಮಂತರು ದುಡ್ಡುಕೊಟ್ಟು ಓಡಾಡುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
PublicNext
05/01/2025 05:50 pm