ಶಿಗ್ಗಾವಿ: ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಾರಿ ಕಟ್ಟಡಗಳ ಸಂಕೀರ್ಣಗಳ ಮುಂಭಾಗದಲ್ಲಿ ಇಂದು ನ್ಯಾಯವಾದಿ ಬಸವರಾಜ ಜಕ್ಕನಕಟ್ಟಿ ಹಾಗೂ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ಇಂದು ದೇಶವೇ ಶೋಕಾಚರಣೆ ಆಚರಿಸುತ್ತಿದೆ. ಆದರೆ ಇಲ್ಲಿನ ಅಧಿಕಾರಿಗಳು ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಕಟ್ಟಡಗಳ ಸಂಕೀರ್ಣಗಳ ರಾಷ್ಟ್ರ ಧ್ವಜವನ್ನು ಹಾರಿಸದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಅಗೌರವ ಸೂಚಿಸಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳನ್ನು ಡಿಸಿಯವರು ಕೂಡಲೇ ಅಮಾನತು ಮಾಡಬೇಕು ಎಂದರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಕಾಳೆ, ಗುಡ್ಡಪ್ಪ ಜಲದಿ, ಗದಿಗೆಪ್ಪ ಬಳ್ಳಾರಿ, ಬಸವರಾಜ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.
PublicNext
27/12/2024 08:10 pm