ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ಶವಯಾತ್ರೆ ವೇಳೆ ಪಟಾಕಿ ಸಿಡಿದು ಅಗ್ನಿ ಅವಘಡ - ಬಣಿವೆಗೆ ಬೆಂಕಿ, ಜಾನುವಾರುಗಳಿಗೆ ಗಾಯ

ಹಾವೇರಿ : ಶವದ ಅಂತಿಮಯಾತ್ರೆ ವೇಳೆ ಹಚ್ಚಿದ್ದ ಪಟಾಕಿಯಿಂದ ಅಗ್ನಿ ಅವಘಡ ಸಂಭವಿಸಿದೆ. ಪಟಾಕಿ ಸಿಡಿಸಿದ ವೇಳೆ ಬಣವೆಗೆ ಬೆಂಕಿ ಬಿದ್ದಿದೆ. ಇನ್ನು ಅವಘಡದಲ್ಲಿ ಜಾನುವಾರುಗಳು ಗಾಯಗೊಂಡಿರುವ ಘಟನೆ

ಹಾವೇರಿ ತಾಲೂಕು ಅಗಡಿ ಗ್ರಾಮದಲ್ಲಿ ನಡೆದಿದೆ.

ಶವ ತೆಗೆದುಕೊಂಡು ಹೋಗುವಾಗ ಹಚ್ಚಿದ್ದ ಪಟಾಕಿ ಸಿಡಿದು ಈ ದುರ್ಘಟನೆ ಸಂಭವಿಸಿದೆ. ಮಹದೇವಪ್ಪ ಶಿವಣ್ಣನವರ ಎಂಬುವರಿಗೆ ಸೇರಿದ್ದ ಬಣವೆಗಳು ಸುಟ್ಟು ಕರಕಲಾಗಿವೆ. ಸುಮಾರು 3 ಲಕ್ಷ ರೂಪಾಯಿ ಬೆಲೆ ಬಾಳುವ ಮೇವು ಮತ್ತು ಇತರೆ ವಸ್ತುಗಳ ಸುಟ್ಟು ಕರಕಲಾಗಿವೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Edited By : Vinayak Patil
PublicNext

PublicNext

07/01/2025 08:14 pm

Cinque Terre

38.71 K

Cinque Terre

0