ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ವಿದ್ಯುತ್ ತಂತಿ ಸ್ಪರ್ಶಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಸುಟ್ಟು ಕರಕಲು

ಹಾವೇರಿ: ವಿದ್ಯುತ್ ತಂತಿ ಸ್ಪರ್ಶಿಸಿ 6 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ತಡಸ ಗ್ರಾಮದಲ್ಲಿ ನಡೆದಿದೆ. ಮೂರು ರೈತರಿಗೆ ಸೇರಿದ ಆರು ಎಕರೆ ಕಬ್ಬು ಬೆಂಕಿಗಾಹುತಿಯಾಗಿದೆ. ಸುಮಾರು 20 ಲಕ್ಷ ಮೌಲ್ಯದ ಕಬ್ಬಿನ ಬೆಳೆ ಸಂಪೂರ್ಣ ನಾಶವಾಗಿದೆ.

ತಡಸ ಗ್ರಾಮದ ನಿಂಗಪ್ಪ ಗರಗದಗೆ ಸೇರಿದ - ಎರಡೂವರೆ ಎಕರೆ ಕಬ್ಬು, ಕೃಷ್ಣಪ್ಪ ಚವಡಾಳಗೆ ಸೇರಿದ 2 ಎಕರೆ ಕಬ್ಬು ಮತ್ತು ನಿಂಗಪ್ಪ ಗರಗದಗೆ ಸೇರಿದ ಒಂದೂವರೆ ಎಕರೆಯ ಕಬ್ಬು ಸುಟ್ಟು ಕರಕಲಾಗಿದೆ. ಮೂವರು ರೈತರಿಗೆ ಸೇರಿದ ಕಬ್ಬಿ‌ನ ಬೆಳೆ ನಾಶವಾಗಿದ್ದು ರೈತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಘಟನೆಗೆ‌ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರೈತರು ಆರೋಪಿಸಿದ್ದಾರೆ.

Edited By : Suman K
Kshetra Samachara

Kshetra Samachara

02/01/2025 04:35 pm

Cinque Terre

14.02 K

Cinque Terre

0