ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೀಕರ ರಸ್ತೆ ಅಪಘಾತ ಅಪಘಾತ : ಒಂದೇ ಕುಟುಂಬದ ನಾಲ್ವರ ಸಾವು

ಶಿಗ್ಗಾಂವ : ಎರಡು ಕಾರುಗಳ ನಡುವೆ ಭೀಕರ ಅಪಘಾತವಾದ ಹಿನ್ನೆಲೆಯಲ್ಲಿ, ಒಂದೇ ಕುಟುಂಬದ ನಾಲ್ಕು ಜನ ಸಾವನ್ನಪ್ಪಿದ ಘಟನೆ, ಶಿಗ್ಗಾಂವಿ ತಾಲ್ಲೂಕಿನ ತಡಸ ನೀರಲಗಿ ಗ್ರಾಮದ ಬಳಿ ಇರೋ ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ.

ಹೌದು ಎಕ್ಸೂವ್ವಿ ಕಾರ್ ಮತ್ತು ಆಲ್ಟ್ರೋಜ್ ಕಾರನ ಮದ್ಯ ಅಪಘಾತವಾಗಿದ್ದು, ಆಲ್ಟ್ರೋಜ್ ಕಾರಲ್ಲಿದ್ದ ಒಂದೇ ಕುಟುಂಬದ ನಾಲ್ಕು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅತೀವೇಗವಾಗಿ ಬಂದ ಎಕ್ಸೂವಿ ಕಾರ್ ಡೀವೈಡರ್‌ಗೆ ಡಿಕ್ಕಿ ಹೊಡೆದು, ಅಪೋಸಿಟ್ ರಸ್ತೆಯಲ್ಲಿ ಬರುತ್ತಿದ್ದ ಆಲ್ಟ್ರೋಜ್ ಕಾರಿಗೆ ಗೆದ್ದಿದ್ದಾನೆ. ಒಂದು ಮಗು ಸೇರಿ ನಾಲ್ಕು ಜನರು ಇಹಲೋಕ ಸೇರಿದ್ದಾರೆ. ಸದ್ಯ ಮೃತರ ಹೆಸರು ಪತ್ತೆಯಾಗಿಲ್ಲ. ಸ್ಥಳಕ್ಕೆ ಹಾವೇರಿ ಎಸ್.ಪಿ ಅಂಶುಕುಮಾರ್ ಭೇಟಿ ಪರಿಶೀಲನೆ ಮಾಡಿದ್ದಾರೆ. ತಡಸ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Edited By : Nirmala Aralikatti
PublicNext

PublicNext

25/12/2024 02:34 pm

Cinque Terre

23.4 K

Cinque Terre

3