ಹಾವೇರಿ: ಬೆಂಗಳೂರಿನ ಚಾಮರಾಜಪೇಟಿಯ ವಿನಾಯಕ ನಗರದ ಹಸುಗಳ ಕೆಚ್ಚಲು ಕತ್ತರಿಸಿದ ಘಟನೆಗೆ ಹಾವೇರಿಯ ಬಣ್ಣದಮಠಶ್ರೀಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ನಾನು ತಾಯಿ ಹಾಲಿಗಿಂತ ಹೆಚ್ಚು ಗೋಹಾಲು ಕುಡಿದು ಬೆಳೆದಿದ್ದೇನೆ ಇಂತಹ ಘಟನೆ ಮಾಡಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬಣ್ಣದಮಠದ ಅಭಿನವ ಚೆನ್ನಮಲ್ಲಿಕಾರ್ಜುನಶ್ರೀಗಳು ಒತ್ತಾಯಿಸಿದರು.
ಆರೋಪಿಗಳು ಹಸುವಿನ ಕೆಚ್ಚಲು ಕೊಯ್ದು ಆಮಾನವೀಯವಾಗಿ ವರ್ತಿಸಿದ್ದಾರೆ. ಗೋಮಾತೆ ಯಾವ ಜಾತಿಮತಗಳನ್ನು ನೋಡದೆ ಎಲ್ಲರಿಗೂ ಹಾಲು ನೀಡುತ್ತೆ. ಎಲ್ಲ ಜಾತಿಮತಗಳು ಸಹ ಗೋವುಗಳ ಸಂರಕ್ಷಣೆ ಮಾಡಬೇಕು. ಇಂತಹ ಸಂದರ್ಭದಲ್ಲಿ ಕಿಡಿಗೇಡಿಗಳು ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ಶೋಚನೀಯ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
PublicNext
12/01/2025 09:47 pm