ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: 'ರಾಜಕಾರಣಿಗಳು ಪಕ್ಷಬೇದ ಮರೆತು ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಿ'

ಹಾವೇರಿ: ಅಲಹಾಬಾದ್ ಪ್ರಯಾಗರಾಜನಲ್ಲಿ ಮಹಾಕುಂಭಮೇಳ ಆರಂಭವಾಗಿದೆ. ಈ ಮಹಾಕುಂಭಮೇಳದಲ್ಲಿ ಪಕ್ಷಬೇದ ಮರೆತು ಎಲ್ಲ ರಾಜಕಾರಣಿಗಳು ಭಾಗವಹಿಸಬೇಕು ಎಂದು ಮಾಜಿ ಸಂಸದ ಮಂಜುನಾಥ್ ಖುನ್ನೂರು ತಿಳಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವನಲ್ಲಿ ಮಾತನಾಡಿದ ಅವರು ರಾಜಕೀಯದಲ್ಲಿ ಧರ್ಮವಿರಬೇಕು ಧರ್ಮದಲ್ಲಿ ರಾಜಕೀಯ ಇರಬಾರದು ಎಂದು ತಿಳಿಸಿದರು.

ನಾನು ಫೆಬ್ರುವರಿ 23 ರಂದು ಮಹಾಕುಂಭಮೇಳದಲ್ಲಿ ಭಾಗವಹಿಸುತ್ತೇನೆ. ಈ ಐತಿಹಾಸಿಕ ಮೇಳದಲ್ಲಿ ೪೫ ಕೋಟಿ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇಂತಹ ಮೇಳದಲ್ಲಿ ಭಾಗವಹಿಸುವದು ನನ್ನ ಪುಣ್ಯ.

ಇಂತಹ ವಿಷಯದಲ್ಲಿ ನನಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗಿಗೆ ಪಾತ್ರವಾಗುತ್ತಾರೆ. ನಾನು ಕಾಂಗ್ರೆಸ್ ಪಕ್ಷದಲ್ಲಿರಬಹುದು ಈ ವಿಚಾರದಲ್ಲಿ ಮೋದಿ ನನಗೆ ಹೆಚ್ಚುಇಷ್ಟವಾಗುತ್ತಾರೆ. ಅವರಂತೆ ಎಲ್ಲ ಹಿಂದೂ ರಾಜಕಾರಣಿಗಳಿ ಪಕ್ಷಬೇಧ ಮರೆತು ಮಹಾಕುಂಭಮೇಳದಲ್ಲಿ ಭಾಗವಹಿಸಿ ಎಂದು ಮಂಜುನಾಥ್ ಖುನ್ನೂರು ಮನವಿ ಮಾಡಿದರು.

Edited By : PublicNext Desk
Kshetra Samachara

Kshetra Samachara

14/01/2025 02:22 pm

Cinque Terre

2.26 K

Cinque Terre

0

ಸಂಬಂಧಿತ ಸುದ್ದಿ