ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ - ಮಹಿಳೆಯರ ಯಶೋಗಾಥೆ ಪರಿಚಯ

ಹಾವೇರಿ: ಜಿಲ್ಲೆ ರಾಣೆಬೆನ್ನೂರಿನ ವಂದೇಮಾತರಂ ಸಂಸ್ಥೆಯ ಪ್ರಕಾಶ್ ಬುರಡಿಕಟ್ಟಿ ಕಳೆದ 16 ವರ್ಷದಿಂದ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಸ್ಥಾಪನೆ ಮಾಡುತ್ತಾ ಬರುತ್ತಿದ್ದಾರೆ. ಪ್ರತಿವರ್ಷ ಒಂದಿಲ್ಲಾ ಒಂದು ಸಂದೇಶ ನೀಡುವ ಪ್ರಕಾಶ್ ಬುರಡಿಕಟ್ಟಿ ಈ ವರ್ಷ ಸಾಧನೆ ಮಾಡಿರುವ ಮಹಿಳೆಯರ ಯಶೋಗಾಥೆಯನ್ನ ಭಕ್ತರಿಗೆ ತಿಳಿಸುತ್ತಿದ್ದಾರೆ. ಜಿಲ್ಲೆ ರಾಜ್ಯ ದೇಶದಲ್ಲಿ ಮಹಾನ ಸಾಧನೆ ಮಾಡಿದ 37 ಮಹಾನ ಸಾಧಕರ ಕಥೆಯನ್ನ ಗಣೇಶ ದರ್ಶನಕ್ಕೆ ಬರುವ ಭಕ್ತರಿಗೆ ಪರಿಚಯಿಸುತ್ತಿದ್ದಾರೆ.

ಇನ್ಪೋಸಿಸ್‌ನ ಸುಧಾಮೂರ್ತಿ ಸೇರಿದಂತೆ ಹಾವೇರಿ ಜಿಲ್ಲೆಯ 9 ಮಹಾನ್ ಸಾಧಕಿಯರ ಚಿತ್ರ ಬಿಡಿಸಲಾಗಿದೆ. ಅವರು ಕುರಿತ ಸಂಕ್ಷಿಪ್ತ ಮಾಹಿತಿಯನ್ನ ಹಾಕಲಾಗಿದೆ. ಜೊತೆಗೆ ರಾಜ್ಯದ ಸಾಲುಮರದ ತಿಮ್ಮಕ್ಕೆ,ಓನಕೆ ಒಬವ್ವ, ಚಿಂದೋಡಿ ಲೀಲಾ, ಇತ್ತಿಚೀಗೆ ನಿಧನರಾದ ನಿರೂಪಕಿ ಅಪರ್ಣಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರ ಯಶೋಗಾಥೆ ಗಣೇಶನ ದರ್ಶನಕ್ಕೆ ಬಂದ ಭಕ್ತರ ಗಮನ ಸೆಳೆಯುತ್ತೆ.

ಗಣೇಶ ಮಂಟಪದ ಪಕ್ಕದಲ್ಲಿಯೇ ನವದುರ್ಗೆಯರ ವೈಭವ ರಚಿಸಲಾಗಿದೆ. ಅರಮನೆಯ ಆವರಣದಲ್ಲಿ ನವದುರ್ಗೆಯರ ಮೂರ್ತಿಗಳನ್ನು ನಿರ್ಮಿಸಲಾಗಿದ್ದು ನವದುರ್ಗೇಯರ ಮೂರ್ತಿಗಳು ಒಂದಕ್ಕಿಂತ ಒಂದು ಆಕರ್ಷಣೀಯವಾಗಿವೆ. ಶ್ರೀಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ,ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ದಿಧಾತ್ರಿ ದೇವಿಯರ ಮೂರ್ತಿಗಳು ಗಣೇಶ ಚತುರ್ಥಿಯಲ್ಲಿಯೇ ದಸರೆಯ ಸಂಭ್ರಮ ತಂದುಕೊಟ್ಟಿವೆ. ಪಾರ್ವತಿಯ ತೊಡೆಯ ಮೇಲೆ ಕುಳಿತ ಗಣೇಶ ವಿಗ್ರಹ ಆಕರ್ಷಣೀಯವಾಗಿದೆ.

Edited By : Nagesh Gaonkar
PublicNext

PublicNext

18/09/2024 07:58 am

Cinque Terre

24.44 K

Cinque Terre

0