ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ದೇಶ ಪ್ರೇಮ ಮೆರೆದ ಮುಸ್ಲಿಂ ಬಾಂಧವರು

ಹಾವೇರಿ: ಈದ್ ಮಿಲಾದ್ ಆಚರಣೆ ವೇಳೆ ರಾಷ್ಟ್ರದ್ವಜ ಹಿಡಿಯುವ ಮೂಲಕ ಹಾವೇರಿ ಮುಸ್ಲಿಂ ಬಾಂಧವರು ರಾಷ್ಟ್ರಪ್ರೇಮ ಮೆರೆದಿದ್ದಾರೆ. ಹಾವೇರಿಯಲ್ಲಿ ಮುಸ್ಲಿಂ ಬಾಂಧವರು ಅದ್ದೂರಿಯಾಗಿ ಈದ್ ಮಿಲಾದ್ ಹಬ್ಬ ಆಚರಿಸಿದರು.

ಆಚರಣೆ ಅಂಗವಾಗಿ ನಗರದ ದರ್ಗಾದ ಮೈದಾನದಿಂದ ವಿವಿಧ ಪ್ರಮುಖ ರಸ್ತೆಯಲ್ಲಿ ಅದ್ದೂರಿ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ರಾಷ್ಟ್ರಧ್ವಜ ಹಿಡಿಯುವ ಮೂಲಕ ಮುಸ್ಲಿಂ ಬಾಂಧವರು ದೇಶಭಕ್ತಿ ಮೆರೆದರು.

ಮೆರವಣಿಗೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು, ಮಕ್ಕಳು , ಯುವಕರು ಭಾಗಿಯಾಗಿದ್ದರು. ಕೈಯಲ್ಲಿ ಹಸಿರು ಝಂಡಾ ಹಿಡಿದು ಮೆರವಣಿಗೆಯಲ್ಲಿ ಭಾಗಿಯಾದ ಮುಸ್ಲಿಂ ಬಾಂಧವರು ವಿವಿಧ ಘೋಷಣೆ ಕೂಗಿದರು.

Edited By : Suman K
Kshetra Samachara

Kshetra Samachara

16/09/2024 06:43 pm

Cinque Terre

8.18 K

Cinque Terre

0