ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಬಿದಿರಿನಲ್ಲಿ ಮೈದಳೆದ ಕಲ್ಲಿನ ರಥ

ಹಾವೇರಿ: ಹಾವೇರಿ ಜಿಲ್ಲೆ ರಾಣೆಬೆನ್ನೂರು ಪಟ್ಟಣದ ಮೇದಾರ ಸಮಾಜದ ಯುವಕರು ಈ ವರ್ಷ ವಿಶಿಷ್ಠವಾಗಿ ಗಣೇಶ ಚತುರ್ಥಿ ಅಲಂಕಾರ ಮಾಡಿದ್ದಾರೆ. ಹಂಪಿಯ ವಿರೂಪಾಕ್ಷದೇವಾಸ್ಥಾನದ ಮುಂದೆ ಇರುವ ಕಲ್ಲಿನ ರಥದ ಪ್ರತಿಕೃತಿಯನ್ನ ಬಿದಿರಿನಲ್ಲಿ ನಿರ್ಮಿಸಿದ್ದಾರೆ. ಬಿದಿರಿನ ರಥದಲ್ಲಿ ಗಣೇಶ ಸ್ಥಾಪನೆ ಮಾಡುವ ಮೂಲಕ ವೈಶಿಷ್ಟ್ಯತೆ ಮೆರೆದಿದ್ದಾರೆ. ತಮ್ಮ ಜೀವಾಳ ಬಿದಿರು ಈ ಹಿನ್ನೆಲೆಯಲ್ಲಿ ಬಿದಿರಿನಲ್ಲಿಯೇ ಕಲ್ಲಿನ ರಥ ಪ್ರತಿರೂಪ ರಚಿಸಿದ್ದಾಗಿ ಸಮಾಜದ ಯುವಕರು ತಿಳಿಸಿದ್ದಾರೆ.

ಸುಮಾರು 200 ಕ್ಕೂ ಅಧಿಕ ಬಿದಿರಿನ ಬೊಂಬುಗಳನ್ನು ತಗೆದುಕೊಂಡು ಅದರಲ್ಲಿ ಮೆತ್ತನೀಯ ಭಾಗವನ್ನು ಮಾತ್ರ ತಗೆದುಕೊಂಡು ಈ ಅದ್ಭುತ ರಥವನ್ನ ನಿರ್ಮಿಸಿದ್ದಾರೆ. ದಿನನಿತ್ಯ 50 ಕ್ಕೂ ಅಧಿಕ ನುರಿತ ಕೆಲಸಗಾರರು ಸುಮಾರು 45 ದಿನಗಳ ಕಾಲ ಕೆಲಸ ಮಾಡಿ ಈ ವಿಶಿಷ್ಟ ರಥ ನಿರ್ಮಿಸಿದ್ದಾರೆ. ಇದಕ್ಕಾಗಿ ಸುಮಾರು 6 ಲಕ್ಷ ರೂಪಾಯಿಯನ್ನ ಈ ಸಮಾಜದ ಯುವಕರೇ ಖರ್ಚು ಮಾಡಿ ಈ ರಥ ಮಾಡಿದ್ದಾರೆ.

ಕಳೆದ ವರ್ಷ ಬಿದಿರಿನಲ್ಲಿಯೇ ಪ್ಯಾರಿಸ್‌ನ ಐಫೆಲ್ ಟವರ್ ನಿರ್ಮಿಸಿದ್ದೆವು. ಈ ವರ್ಷ ನಮ್ಮ ರಾಜ್ಯದ ಐತಿಹಾಸಿಕ ಹಂಪಿ ಕಲ್ಲಿನ ರಥದ ಪ್ರತಿಕೃತಿಯನ್ನ ರಚಿಸಲು ಮುಂದಾದೆವು. ಆರಂಭದಲ್ಲಿ ಸ್ವಲ್ಪ ಕಷ್ಟವಾಯಿತು. ದಿನ ಕಳೆದಂತೆ ಕಲಾಕೃತಿ ಹಿಡಿತಕ್ಕೆ ಬಂದು ಇದೀಗ ಕಲ್ಲಿನ ರಥದ ತದ್ರೂಪದಂತೆ ಬಿದಿರಿನಲ್ಲಿ ರಥ ನಿರ್ಮಾಣವಾಗಿದೆ. ಗಣೇಶನ ದರ್ಶನಕ್ಕೆ ಬರುವ ಜನರು ಈ ಕಲಾಕೃತಿಯನ್ನು ನೋಡಿ ಸಂಭ್ರಮಿಸುತ್ತಾರೆ ಎನ್ನುತ್ತಾರೆ ಯುವಕರು.

Edited By : Nagesh Gaonkar
PublicNext

PublicNext

16/09/2024 08:12 am

Cinque Terre

25.66 K

Cinque Terre

0