ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಮನೆಯಲ್ಲಿ ಕೇದಾರನಾಥ ಪ್ರತಿಕೃತಿ ರಚನೆ

ಹಾವೇರಿ ಹಲಗಣ್ಣನವರ್ ಕುಟುಂಬ ಕಳೆದ 23 ವರ್ಷಗಳಿಂದ ಗಣೇಶನ ಪ್ರತಿಷ್ಟಾಪನೆಗೆ ವಿಶೇಷ ಪ್ರತಿಕೃತಿ ನಿರ್ಮಿಸಿ ಸಂಭ್ರಮಿಸುತ್ತಿದೆ. ಕಳೆದ ವರ್ಷ ಕೃಷ್ಣನ ಲೀಲೆಗಳ ಅಲಂಕಾರ ಮಾಡಿದ್ದ ಈ ಕುಟುಂಬದ ಸೊಸೆ ದೀಪಾ ಈ ವರ್ಷ ಕೇದಾರನಾಥ್ ಕ್ಷೇತ್ರದ ಪ್ರತಿಕೃತಿಯನ್ನು ನಿರ್ಮಿಸಿದ್ದಾರೆ. ಅದರಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ವಿಶೇಷ ಅಲಂಕಾರ ಮಾಡಿದ್ದಾರೆ.

ಕೇದಾರನಾಥ ದೇವಸ್ಥಾನ, ದೇವಸ್ಥಾನಕ್ಕೆ ಸಾಗುವ ಮಾರ್ಗ. ಕೇದಾರನಾಥ ದೇವಸ್ಥಾನದ ಪ್ರತಿಕೃತಿಗಳು ಕಣ್ಮನ ಸೆಳೆಯುತ್ತಿವೆ. ಕೇದಾರನಾಥ ದೇವಸ್ಥಾನದ ಸುತ್ತ ಇರುವ ಹಿಮಚ್ಚಾಧಿತ ಪರ್ವತಗಳು ಅಲಂಕಾರಕ್ಕೆ ಮತ್ತಷ್ಟು ಮೆರುಗು ನೀಡುತ್ತೀವೆ. ಕುದುರೆ ಮೇಲೆ ಸಾಗುವ ಭಕ್ತರು,ಟೋಕರಿಗಳ ಮೇಲೆ ಸಾಗುವ ಭಕ್ತರು ಡೋಲಿಗಳ ಮೇಲೆ ಸಾಗುವ ಭಕ್ತರು ಅಷ್ಟೇ ಯಾಕೆ ಹೆಲಿಕ್ಯಾಪ್ಟರ್ ಮೂಲಕ ಸಾಗುವ ಭಕ್ತರ ಪ್ರತಿಕೃತಿಗಳನ್ನು ಇಲ್ಲಿ ರಚಿಸಲಾಗಿದೆ.

ಕೇದಾರನಾಥ್ ದೇವಸ್ಥಾನಕ್ಕೆ ಹೋಗುವ ಮುನ್ನ ಹರಿಯುವ ಮಂದಾಕಿನಿ ನದಿ ಅದನ್ನು ಸಾಗುವ ಭಕ್ತರು ದಂಡು ಇಲ್ಲಿ ನಿರ್ಮಿಸಲಾಗಿದೆ. ದೇವಸ್ಥಾನದ ಆವರಣದಲ್ಲಿರುವ ನಾಗಾಸಾಧುಗಳ ಪ್ರತಿಕೃತಿಗಳು ಸೇರಿದಂತೆ ವಿವಿಧ ಸಾಧುಸನ್ಯಾಸಿಗಳ ವೇಷಭೂಷಣಗಳು ಸುಂದರವಾಗಿವೆ. ದೇವಸ್ಥಾನದ ಒಳಗೆ ಇರುವ ಶಿವನನ್ನ ಸಹ ಅಲ್ಲಿಯ ರೂಪದಲ್ಲಿಯೇ ರಚಿಸಲಾಗಿದೆ. ಹಲಗಣ್ಣನವರ ಕುಟುಂಬದ ಗೃಹಿಣಿ ದೀಪಾ ಕಳೆದ 15 ದಿನಗಳಿಂದ ಶ್ರಮಿಸಿ ಈ ಕೇದಾರನಾಥ್ ಪ್ರತಿಕೃತಿ ರಚಿಸಿದ್ದಾರೆ.

Edited By : Shivu K
PublicNext

PublicNext

10/09/2024 09:18 pm

Cinque Terre

33.33 K

Cinque Terre

0