ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ನೆಚ್ಚಿನ ಶ್ವಾನಕ್ಕೆ ಸೀಮಂತ ಕಾರ್ಯಕ್ರಮ, ಪ್ರಾಣಿಪ್ರಿಯರ ಸಂಭ್ರಮ

ಹಾವೇರಿ: ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಅಕ್ಕಿ ಆಲೂರಿನ ಕರಿಬಸಪ್ಪ ಗೊಂದಿ ತಮ್ಮ ನೆಚ್ಚಿನ ಶ್ವಾನ ರಿಧಿಗೆ ಸೀಮಂತ ಕಾರ್ಯಕ್ರಮ ನಡೆಸಿದರು. ಮನೆಯ ಸದಸ್ಯರಲ್ಲಿ ಒಂದಾಗಿರುವ ರಿಧಿ ಮೊದಲ ಬಾರಿಗೆ ಗರ್ಭಿಣಿಯಾಗಿದ್ದು ಶ್ವಾನಕ್ಕೆ ಗೊಂದಿ ಕುಟುಂಬದ ಸದಸ್ಯರು ಸೀಮಂತ ಮಾಡಿದರು. ರಿಧಿಗೆ ಸ್ನಾನ ಮಾಡಿಸಿ ಅದರ ಕಾಲುಗಳಿಗೆ ನೇಲ್‌ ಪಾಲಿಷ್ ಹಚ್ಚಿದರು. ರಿಧಿಗೆ ಹೊಸ ಫ್ರಾಕ್ ಹಾಕಿ ಹಣೆಗೆ ಬೊಟ್ಟು ಇಟ್ಟು ಸಂಭ್ರಮಿಸಿದರು.

ನಂತರ ನಡೆದ ಸರಳ ಕಾರ್ಯಕ್ರಮದಲ್ಲಿ ರಿಧಿ ನಿಲ್ಲಿಸಿ ಸೀಮಂತದ ಕಾರ್ಯಗಳನ್ನು ಮಾಡಿದರು. ರಿಧಿ ಸೀಮಂತಕ್ಕೆ ಆಗಮಿಸಿದ ಅಕ್ಕಪಕ್ಕದ ಮಹಿಳೆಯರು ರಿಧಿಗೆ ಕುಂಕುಮ ಅರಿಶಿಣ ಹಚ್ಚಿ ಆರತಿ ಬೆಳಗಿ ಸಂಭ್ರಮಿಸಿದರು. ಸೀರೆಯನ್ನು ರಿಧಿ ಮೇಲೆ ಹಾಕಿ ಹರ್ಷಿಸಿದರು. ಬೊಮ್ಮನಹಳ್ಳಿ ಗ್ರಾಮದ ಶ್ವಾನ ತರಬೇತುದಾರ ರಂಜಿತ್ ತಮ್ಮ ನೆಚ್ಚಿನ ಶ್ವಾನ ಕಾಳಿಯನ್ನು ರಿಧಿ ಸೀಮಂತಕ್ಕೆ ಕರೆತಂದಿದ್ದರು. ಕಾಳಿ ಶ್ವಾನದಿಂದ ರಿಧಿ ಶ್ವಾನಕ್ಕೆ ಸೀರೆಯನ್ನು ನೀಡುವ ಮೂಲಕ ರಿಧಿ ಸೀಮಂತಕ್ಕೆ ಹಾರೈಸಿದರು.

ಅಕ್ಕಪಕ್ಕದ ಶ್ವಾನಪ್ರೇಮಿಗಳು ತಮ್ಮ ಶ್ವಾನಗಳನ್ನು ರಿಧಿ ಸೀಮಂತ ಕಾರ್ಯಕ್ರಮಕ್ಕೆ ಕರೆತಂದಿದ್ದರು. ರಿಧಿ ಜೊತೆ ತಮ್ಮ ಶ್ವಾನಗಳನ್ನು ನಿಲ್ಲಿಸಿ ಶುಭ ಹಾರೈಸಿದರು. ನಿಕ್ಕಿ ಮತ್ತು ಜ್ಯೂಲಿ ಶ್ವಾನಗಳನ್ನು ಸಹ ಸೀಮಂತ ಕಾರ್ಯಕ್ಕೆ ಸಿಂಗರಿಸಿ ತರಲಾಗಿತ್ತು. ರಿಧಿ ಸಂಪೂರ್ಣ ಸಸ್ಯಹಾರಿಯಾಗಿದ್ದು ಸೀಮಂತ ಕಾರ್ಯಕ್ರಮದಲ್ಲಿ ಅದರ ನೆಚ್ಚಿನ ತಿನಿಸುಗಳಾದ ಚಕ್ಕಲಿ,ಶೇಂಗಾ ಚಿಕ್ಕಿ ಸೇರಿದಂತೆ ವಿವಿಧ ಆಹಾರಗಳನ್ನ ಇಡಲಾಗಿತ್ತು. ಬಂದ ಅತಿಥಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Edited By : Somashekar
PublicNext

PublicNext

17/09/2024 12:53 pm

Cinque Terre

19.9 K

Cinque Terre

0