ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ವಕ್ಫ್‌ ಬೋರ್ಡ್ ತಿದ್ದುಪಡಿ ಕ್ರಮ, ಕೇಂದ್ರ ಸರ್ಕಾರಕ್ಕೆ ಮುತಾಲಿಕ್ ಅಭಿನಂದನೆ

ಹಾವೇರಿ: ಕೇಂದ್ರ ಸರ್ಕಾರದ ವಕ್ಫ್‌ ಬೋರ್ಡ್ ತಿದ್ದುಪಡಿ ಕ್ರಮಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ತಿದ್ದುಪಡಿ ಪರವಾಗಿ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ ನಾವು ಮಾಡುತ್ತೇವೆ ಎಂದು ಮುತಾಲಿಕ್ ತಿಳಿಸಿದರು.

ಕಾಂಗ್ರೆಸ್‌ ನ ಕೆಟ್ಟ ನಿಯಮದಿಂದ ದೇಶದಲ್ಲಿ ವಕ್ಫ್‌ ಬೋರ್ಡ್ ರಚನೆಯಾಗಿದೆ. ಅವರ ಆಸ್ತಿ ವಿವರಣೆ ನೋಡಿದ್ರೆ ನಾವು ದಂಗಾಗ್ತೀವಿ. ರೈಲ್ವೇ & ಆರ್ಮಿ ಬಳಿಗಿಂತ ಹೆಚ್ಚು ಆಸ್ತಿ ವಕ್ಫ್‌ ಬೋರ್ಡ್ ಬಳಿ ಇದೆ ಎಂದು ಮುತಾಲಿಕ್ ಆರೋಪಿಸಿದರು.

10 ಲಕ್ಷ ಎಕರೆ ವಕ್ಫ್‌ ಬೋರ್ಡ್ ಬಳಿ ಆಸ್ತಿ ಇದೆ. ವಿಶ್ವದಲ್ಲಿರುವ 50 ಮುಸ್ಲಿಂ ದೇಶದ ಆಸ್ತಿಗಿಂತ ಭಾರತ ವಕ್ಫ್‌ ಬೋರ್ಡ್ ಬಳಿ ಹೆಚ್ಚು ಆಸ್ತಿ ಇದೆ ಎಂದು ಮುತಾಲಿಕ್ ಆರೋಪಿಸಿದರು. ಸರ್ಕಾರದ ಆಸ್ತಿಯನ್ನ ನುಂಗ್ತಿರೋದು ವಕ್ಫ್‌ ಬೋರ್ಡ್. ಕೇಂದ್ರ ಸರ್ಕಾರ ವಕ್ಫ್‌ ಬೋರ್ಡ್ ತಿದ್ದುಪಡಿ ಮಾಡುವುದಷ್ಟೇ ಅಲ್ಲಾ ರದ್ದು ಮಾಡಬೇಕು ಎಂದು ಮುತಾಲಿಕ್ ಆಗ್ರಹಿಸಿದರು.

ಸಚಿವ ಜಮೀರ್ ಅಹ್ಮದ್ ಅವರು ವಕ್ಫ್‌ ಆಸ್ತಿ ದೇವರ ಆಸ್ತಿ ಎಂಬ ವಿಚಾರ ಕುರಿತಂತೆ ಮಾತನಾಡಿದ ಅವರು, ಅನ್ವರ್ ಮಾನಪಾಡಿ ರಿಪೋರ್ಟ್ ಜಾರಿ ತನ್ನಿ ಎಂದು ಒತ್ತಾಯಿಸಿದರು. 20 ಸಾವಿರ ಎಕರೆ ನುಂಗಿದ್ದಾರೆ, ಜಮೀರ್ ಅಹ್ಮದ್ ಸೇರಿ ಕೆಲವರು ವಕ್ಫ್‌ ಆಸ್ತಿ ನುಂಗಿದ್ದಾರೆ ಎಂದು ಮುತಾಲಿಕ್ ಆರೋಪಿಸಿದರು.

ಹಾವೇರಿ ಜಿಲ್ಲೆ ರಟ್ಟಿಹಳ್ಳಿಯಲ್ಲಿ ಹಿಂದೂ ಮಹಾಸಭಾ ಗಣೇಶ ವಿಸರ್ಜನೆಯಲ್ಲಿ ನಾನು ಭಾಗವಹಿಸಬೇಕಿತ್ತು. ಆದರೆ ನನಗೆ ಜಿಲ್ಲಾಡಳಿತ ನನಗೆ ನಿರ್ಬಂಧ ಹಾಕಿದೆ, ಅದೇನು ಪಾಕಿಸ್ತಾನವಾ ಎಂದು ಮುತಾಲಿಕ್ ಪ್ರಶ್ನಿಸಿದರು.

Edited By : Manjunath H D
PublicNext

PublicNext

12/09/2024 06:19 pm

Cinque Terre

29.63 K

Cinque Terre

4

ಸಂಬಂಧಿತ ಸುದ್ದಿ