ಕಾರವಾರ (ಉತ್ತರಕನ್ನಡ): ನನ್ನ ಮಗನ ಸಾವು ಕೊಲೆಯೇ. ಸಿಬಿಐ ವರದಿ ಮೇಲೆ ನನಗೆ ಅಸಮಾಧಾನವಿದೆ ಎಂದು ಮೃತ ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ ಹೇಳಿದ್ದಾರೆ.
ಪರೇಶ್ ಮೇಸ್ತಾ ಪ್ರಕರಣದಲ್ಲಿ ಸಿಬಿಐ ಬಿ ರಿಪೊರ್ಟ್ ಹಾಕಿದ ಹಿನ್ನಲೆ ಹೊನ್ನಾವರದಲ್ಲಿ ಮಾತನಾಡಿದ ಅವರು, ಮಗನ ಕೊಲೆಯಾದ ನಂತರ ಸಾಕ್ಷ್ಯ ನಾಶ ಮಾಡಲಾಗಿತ್ತು. ಈಗ ಸಹಜ ಸಾವು ಎಂದು ಹೇಳಿದ್ದಾರೆ. ಎನ್ಐಎ ತನಿಖೆಯಿಂದ ಸತ್ಯ ಹೊರ ಬರಬೇಕು ಎಂದಿದ್ದಾರೆ.
ಬಿಜೆಪಿ ಸರ್ಕಾರದ ಮೇಲೂ ನನಗೆ ಅಸಮಾಧಾನವಿದೆ. ಮುಂದಿನ ದಿನದಲ್ಲಿ ಎಲ್ಲರೊಂದಿಗೆ ಚರ್ಚಿಸಿ ಮುಂದಿನ ನಿಲುವು ಏನೆಂದು ಕೈಗೊಳ್ಳುತ್ತೇವೆ ಎಂದಿದ್ದಾರೆ.
Kshetra Samachara
04/10/2022 03:10 pm