ಗೋಕರ್ಣ: ಕುಡ್ಲೆಬೀಚಿನಲ್ಲಿ ಈಜಲು ತೆರಳಿ ಅಪಾಯಕ್ಕೆ ಸಿಲುಕಿದ ಮತ್ತಿಬ್ಬರು ಪ್ರವಾಸಿಗರನ್ನ ರಕ್ಷಿಸಲಾಗಿದೆ. ಬಿಹಾರ್ ಮೂಲದ ಪ್ರದೀಪ್ ಗುಪ್ತ , ಅರ್ಪಿತ್ ಬೆಹೆರಾ ಎಂಬುವವರು ರಕ್ಷಣೆಗೊಳಗಾದ ಪ್ರವಾಸಿಗರು. ಇಬ್ಬರು ಸ್ನೇಹಿತರು ನೀರಿನ ಸುಳಿಗೆ ಸಿಲುಕಿ ಕೂಗುತ್ತಿರುವುದನ್ನ ಗಮನಿಸಿದ ಮಿಸ್ಟೇಕ್ ಗೋಕರ್ಣ ಅನ್ವೆಂಚರ್ ಸಿಬ್ಬಂದಿ ಮತ್ತು ಲೈಫ್ ಗಾರ್ಡ್ ಸಿಬ್ಬಂದಿ ನಾಗೇಂದ್ರ ಎಸ್ ಕೂರ್ಲೆ ಮತ್ತು ಮಂಜುನಾಥ್ ಎಸ್ ಹರಿಕಂತ್ರ ಹಾಗೂ ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ತಕ್ಷಣ ರಕ್ಷಿಸಿದ್ದಾರೆ.
Kshetra Samachara
14/12/2024 04:33 pm