ಭಟ್ಕಳ: ಒಂದೇ ಕುಟುಂಬದ ನಾಲ್ವರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ಮಾಡಿರುವ ಘಟನೆ ತಾಲೂಕಿನ ಬೆಳೆಕೆ ಜನತಾ ಕಾಲೋನಿ ಸಮೀಪ ನಡೆದಿದೆ.
ಹೆಜ್ಜೇನು ದಾಳಿಗೆ ಒಳಗಾದವರು ಪರಮೇಶ್ವರಿ ಮಂಜುನಾಥ ಮೊಗೇರ (60)ಮಂಜುನಾಥ ಮಾಸ್ತಿ ಮೊಗೇರೆ (70) ಭರತ ರಾಮಚಂದ್ರನ ಮೊಗೇರ (21) ಎಂದು ತಿಳಿದು ಬಂದಿದೆ. ಇವರು ತಮ್ಮ ಮನೆಯ ಗೇಟ್ ಬಳಿ ನಿಂತಿದ್ದ ವೇಳೆ ಎಲ್ಲಿಂದಲೋ ಏಕಾಏಕಿ ಹೆಜ್ಜೇನು ದಾಳಿ ಮಾಡಿದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡವರನ್ನು ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
PublicNext
15/12/2024 08:27 am